HomeAutoಈ ಅಗ್ಗದ ಎಲೆಕ್ಟ್ರಿಕ್‌ ಕಾರು ಬಳಸಿದ್ರೆ 5 ವರ್ಷಗಳಲ್ಲಿ ಉಳಿತಾಯವಾಗಲಿದೆ 10 ಲಕ್ಷ ರೂಪಾಯಿ..!

ಈ ಅಗ್ಗದ ಎಲೆಕ್ಟ್ರಿಕ್‌ ಕಾರು ಬಳಸಿದ್ರೆ 5 ವರ್ಷಗಳಲ್ಲಿ ಉಳಿತಾಯವಾಗಲಿದೆ 10 ಲಕ್ಷ ರೂಪಾಯಿ..!

ಪೆಟ್ರೋಲ್ ಅಥವಾ ಡೀಸೆಲ್ ಕಾರಿನ ಬದಲು ಎಲೆಕ್ಟ್ರಿಕ್ ಕಾರು ಕೊಳ್ಳಲು   ಬಯಸುವವರಿಗೆ ಉತ್ತಮ ಆಯ್ಕೆಯಿದೆ. ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು ಅತ್ಯುತ್ತಮ. ವಿಶೇಷವೆಂದರೆ ಈ ಕಾರಿನ ಮೂಲಕ ನೀವು 5 ವರ್ಷಗಳಲ್ಲಿ 10 ಲಕ್ಷ ರೂಪಾಯಿಗಳನ್ನು ಉಳಿಸಬಹುದು. ಇದೇ ಮೊತ್ತ ಕಾರಿನ ಬೆಲೆಗೂ ಸರಿಸಮಾನವಾಗಿರುತ್ತದೆ.

ಟಾಟಾ ಟಿಯಾಗೊ ಇವಿ: ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ಮಾಲಿನ್ಯದ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೇಶದ ಹೆಸರಾಂತ ಆಟೋಮೊಬೈಲ್ ಕಂಪನಿಗಳು ವೇಗವಾಗಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತಿವೆ. ಕ್ರಮೇಣ ಗ್ರಾಹಕರೂ ಎಲೆಕ್ಟ್ರಿಕ್ ಕಾರುಗಳತ್ತ ಒಲವು ತೋರುತ್ತಿದ್ದಾರೆ. ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು, ಟಾಟಾ ಟಿಯಾಗೊ EV ಪೆಟ್ರೋಲ್ ಅಥವಾ ಡೀಸೆಲ್ ಕಾರ್‌ನಿಂದ ಎಲೆಕ್ಟ್ರಿಕ್‌ಗೆ ಬದಲಾಯಿಸಲು ಬಯಸುವವರಿಗೆ ಅತ್ಯುತ್ತಮವಾಗಿದೆ. ವಿಶೇಷವೆಂದರೆ ಈ ಕಾರಿನ ಮೂಲಕ ನೀವು 5 ವರ್ಷಗಳಲ್ಲಿ 10 ಲಕ್ಷ ರೂಪಾಯಿಗಳನ್ನು ಉಳಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಾಟಾ ಟಿಯಾಗೊ EV ಬೆಲೆ 8.69 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಿ 11.99 ಲಕ್ಷ ರೂಪಾಯಿವರೆಗಿದೆ. ಟಾಟಾ ಟಿಯಾಗೊ EV ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ: XE, XT, XZ+ ಮತ್ತು XZ+ ಟೆಕ್ ಲಕ್ಸ್. ಇದರಲ್ಲಿ ಬ್ಯಾಟರಿ ಪ್ಯಾಕ್‌ನ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದು 19.2kWh ಮತ್ತು 24kWh ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಪಡೆಯುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 250 ಕಿಮೀ ಮತ್ತು 315 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. Tiago EV ರೂಪಾಂತರವನ್ನು ಅವಲಂಬಿಸಿ 3.3kW ಅಥವಾ 7.2kW ಹೋಮ್ ಚಾರ್ಜರ್‌ನೊಂದಿಗೆ ಬರುತ್ತದೆ.

DC ಫಾಸ್ಟ್ ಚಾರ್ಜಿಂಗ್‌ನೊಂದಿಗೆ, ಇದನ್ನು 57 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ವೈಶಿಷ್ಟ್ಯಗಳನ್ನು ನೋಡುವುದಾದ್ರೆ Tiago EV ಆಂಡ್ರಾಯ್ಡ್ ಆಟೋ ಮತ್ತು Apple CarPlay ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಎತ್ತರ-ಹೊಂದಾಣಿಕೆಯ ಡ್ರೈವಿಂಗ್‌ ಸೀಟ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್ ಮತ್ತು ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರ ಹೊರತಾಗಿ, ಮಲ್ಟಿ-ಡ್ರೈವ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, ರೈನ್-ಸೆನ್ಸಿಂಗ್ ವೈಪರ್‌ಗಳು, ರೇರ್‌ ವ್ಯೂ ಕ್ಯಾಮೆರಾ, ಎಲೆಕ್ಟ್ರಿಕ್ ಆಟೋ ಫೋಲ್ಡ್ ORVM ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಸಹ ಲಭ್ಯವಿದೆ.

ಟಾಟಾ ಮೋಟಾರ್ಸ್‌ನ ಕ್ಯಾಲ್ಕುಲೇಟರ್ ಪ್ರಕಾರ ಈ ಕಾರನ್ನು ಗ್ರಾಹಕರು ದಿನಕ್ಕೆ 100 ಕಿಮೀ ಓಡಿಸಿದರೆ, ಪೆಟ್ರೋಲ್‌ನ ಸರಾಸರಿ ಬೆಲೆ ಲೀಟರ್‌ಗೆ 106.31 ರೂಪಾಯಿ ಆಗಿದ್ದರೆ, ಟಿಯಾಗೊ ಇವಿಯನ್ನು 5 ವರ್ಷಗಳ ಕಾಲ ಬಳಸುವುದರಿಂದ ಪೆಟ್ರೋಲ್ ಕಾರಿಗೆ ಹೋಲಿಸಿದರೆ ಸುಮಾರು 10,182,70 ರೂಪಾಯಿ ಉಳಿತಾಯವಾಗುತ್ತದೆ. ಅಂದರೆ 70 ಪ್ರತಿಶತದಷ್ಟು ಉಳಿತಾಯವಾಗಲಿದೆ. ಟಾಟಾ ಮೋಟಾರ್ಸ್ ಕ್ಯಾಲ್ಕುಲೇಟರ್ ಪ್ರಕಾರ ಈ ಅಂಕಿ ಅಂಶವು ಸರಾಸರಿ ಉಳಿತಾಯದ ಅಂದಾಜು ಎಂಬುದು ಗ್ರಾಹಕರ ಗಮನದಲ್ಲಿರಲಿ.

For Latest News Updates, Join Our Whatsapp Community🚩
RELATED ARTICLES

Most Popular