HomeEntertainment'ಸ್ಮಾಲ್ ಟೌನ್ ಗರ್ಲ್' ಹಾಡಿಗೆ ಇಟಲಿಯಲ್ಲಿ ಯುವಕರ ಸ್ಟೆಪ್​: ನೆಟ್ಟಿಗರು ಫಿದಾ

‘ಸ್ಮಾಲ್ ಟೌನ್ ಗರ್ಲ್’ ಹಾಡಿಗೆ ಇಟಲಿಯಲ್ಲಿ ಯುವಕರ ಸ್ಟೆಪ್​: ನೆಟ್ಟಿಗರು ಫಿದಾ

2008 ರಲ್ಲಿ ಬಿಡುಗಡೆಯಾದ ರಣಬೀರ್ ಕಪೂರ್, ಬಿಪಾಶಾ ಬಸು, ದೀಪಿಕಾ ಪಡುಕೋಣೆ ಮತ್ತು ಮಿನಿಶಾ ಲಂಬಾ ಅಭಿನಯದ ‘ಬಚ್ನಾ ಏ ಹಸೀನೋ’ ನಮಗೆಲ್ಲರಿಗೂ ನೆನಪಿದೆ. ಚಿತ್ರದ ಅನೇಕ ಹಾಡುಗಳು ನಮ್ಮನ್ನು ಸೆಳೆದಿವೆ. ಈಗ, ಇಬ್ಬರು ಪುರುಷರು ಚಲನಚಿತ್ರದ ಹಿಟ್ ಹಾಡುಗಳಲ್ಲಿ ಒಂದಾದ ‘ಸ್ಮಾಲ್ ಟೌನ್ ಗರ್ಲ್’ ಅನ್ನು ಮರು ಸೃಷ್ಟಿಸಿದ್ದಾರೆ, ಬಿಪಾಶಾ ಬಸು ಮತ್ತು ರಣಬೀರ್ ಕಪೂರ್ ಮಾಡಿದ ಡಾನ್ಸ್​ಗೆ ಇಟಲಿಯ ರೋಮ್‌ನಲ್ಲಿ ಅದೇ ಸ್ಥಳದಲ್ಲಿ ಸ್ಟೆಪ್​ ಹಾಕಿದ್ದಾರೆ.

ಈ ವಿಡಿಯೋವನ್ನು ಸೌರವ್ ಗಾರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಬಳಕೆದಾರರು ತಮ್ಮ ಸ್ನೇಹಿತ ಮಾನವ್ ಜೊತೆಗೆ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಪಾಶಾ ಪಾತ್ರದಲ್ಲಿ ಮಾನವ್ ಅದ್ಭುತವಾಗಿ ನಟಿಸಿದ್ದರೆ, ಸೌರವ್ ಅವರು ರಣಬೀರ್ ಕಪೂರ್ ಅವರ ಹೆಜ್ಜೆಗಳನ್ನು ಅನುಕರಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋವನ್ನು ಇದಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಪಾಶಾ ಬಸು ಜಾಗದಲ್ಲಿ ಹುಡುಗಿಯೇ ನೃತ್ಯ ಮಾಡಿದ್ದರೆ ಇನ್ನೂ ಚೆನ್ನಾಗಿತ್ತು ಎಂದು ಹಲವರು ಹೇಳಿದ್ದರೆ, ಮಾನವ್​ ಅವರು ಬಿಪಾಶಾರಂತೆ ಸುಂದರವಾಗಿ ನರ್ತಿಸಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ.

https://youtu.be/mglzSsCrvFc

For Latest News Updates, Join Our Whatsapp Community🚩
RELATED ARTICLES

Most Popular