ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ ಅಭಿನಯದ ಬಹುನಿರೀಕ್ಷಿತ ‘ಪಾರ್ಟ್ನರ್’ ಸಿನಿಮಾದ ಎರಡನೇ ಹಾಡು ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ‘ಲವಲವಿಕೆ’ ಎಂದು ಸಾಗುವ ಈ ಮೆಲೋಡಿ ಹಾಗೂ ಆಕರ್ಷಕ ಹಾಡು ಅಕ್ಟೋಬರ್ ಆರರಂದು ಬೆಳಿಗ್ಗೆ 11:11ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.
ಎಚ್‌ಪಿಆರ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಿವತೇಜಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಜಯ್ ರಾವ್ ಜೊತೆಗೆ ಬೃಂದಾ ಆಚಾರ್ಯ ಹಾಗೂ ಸುಷ್ಮಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಗಿರಿ, ಗೌರವ್ ಶೆಟ್ಟಿ, ಮನೋಹರ, ಅರವಿಂದ್ ರಾವ್, ಚಿತ್ಕಳಾ ಬಿರಾದಾರ್, ಶ್ರೀಭವ್ಯ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ ಹಾಗೂ ಕೆ ಎಂ ಪ್ರಕಾಶ್ ಸಂಕಲನ ಮಾಡಿದ್ದು, ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಡಿಗಿದೆ. ಮೊದಲ ಹಾಡಿಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯ ನಂತರ, ಇದೀಗ ಬಿಡುಗಡೆಯಾಗುತ್ತಿರುವ ಈ ಎರಡನೇ ಹಾಡಿನ ಮೇಲೆಯೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

