HomeEntertainmentರೊಟ್ಟಿ ಮಾಡುವಾಗ ಮಹಿಳೆಯಿಂದ ಸುಮಧುರ ಹಾಡು: ಮುಂದಿನ ಚಿತ್ರದಲ್ಲಿ ಅವಕಾಶ ನೀಡಲು ಸೋನು ಸೂದ್​ ನಿರ್ಧಾರ

ರೊಟ್ಟಿ ಮಾಡುವಾಗ ಮಹಿಳೆಯಿಂದ ಸುಮಧುರ ಹಾಡು: ಮುಂದಿನ ಚಿತ್ರದಲ್ಲಿ ಅವಕಾಶ ನೀಡಲು ಸೋನು ಸೂದ್​ ನಿರ್ಧಾರ

ಅಡುಗೆ ಮಾಡುವಾಗ ʼಮೇರೆ ನೈನಾ ಸಾವನ್ ಬಾಧೋ ಫಿರ್​ ಭೀ ಮೇರಾ ಮನ್​ ಪ್ಯಾಸಾ……ʼ ಹಾಡನ್ನು ಸುಮಧುರವಾಗಿ ಹಾಡಿದ ಮಹಿಳೆ ನೆನಪಿದೆಯೇ ? ಆಕೆಯ ವೀಡಿಯೊ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಆಕೆಯ ಮಧುರ ಧ್ವನಿಯು ಇಂಟರ್ನೆಟ್‌ನಲ್ಲಿ ಸ್ವಲ್ಪ ಸಮಯದಲ್ಲೇ ಗೆದ್ದಿದೆ.

ಇದೀಗ, ವಿಡಿಯೋ ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಪುನಃ ವೈರಲ್ ಆಗುತ್ತಿದೆ. ಈ ಸಮಯದಲ್ಲಿ, ಇದು ನಟ ಸೋನು ಸೂದ್ ಅವರ ಗಮನವನ್ನೂ ಸೆಳೆದಿದೆ. ಸೋನು ಸೂದ್ ಮಹಿಳೆಯ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಮುಂಬರುವ ಚಿತ್ರದಲ್ಲಿ ಈಕೆಯಿಂದ ಹಾಡಿಸುವ ಸಲುವಾಗಿ ಮಹಿಳೆಯ ಸಂಪರ್ಕ ಸಂಖ್ಯೆ ಇದ್ದರೆ ನೀಡುವಂತೆ ಕೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋವನ್ನು ಮೂಲತಃ ಮುಖೇಶ್ ಕುಮಾರ್ ಸಿನ್ಹಾ ಅವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಹಿಳೆಯ ಮಗಳು ರೊಟ್ಟಿ ಮಾಡುವಾಗ ಹಾಡೊಂದನ್ನು ಹಾಡುವಂತೆ ಒತ್ತಾಯಿಸಿದ್ದಾಳೆ. ಸ್ವಲ್ಪ ತಡವರಿಸಿದ ನಂತರ, ಮಹಿಳೆ ಆರ್‌ಡಿ ಬರ್ಮನ್ ಸಂಯೋಜಿಸಿದ ಹಾಡನ್ನು ಹಾಡಿದರು. ಇದು ನೆಟ್ಟಿಗರ ಹೃದಯ ಗೆದ್ದಿದೆ.

For Latest News Updates, Join Our Whatsapp Community🚩
RELATED ARTICLES

Most Popular