HomeKarnatakaBIG NEWS: ಬಿಜೆಪಿ ಮತ್ತೊಬ್ಬ ಸಚಿವರಿಂದಲೂ ಭವಾನಿ ರೇವಣ್ಣಗೆ ಆಹ್ವಾನ

BIG NEWS: ಬಿಜೆಪಿ ಮತ್ತೊಬ್ಬ ಸಚಿವರಿಂದಲೂ ಭವಾನಿ ರೇವಣ್ಣಗೆ ಆಹ್ವಾನ

ಬಾಗಲಕೋಟೆ: ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಫೈಟ್ ವಿಚಾರ ಬೆನ್ನಲ್ಲೇ ಬಿಜೆಪಿ ನಾಯಕರು ಭವಾನಿ ರೇವಣ್ಣ ಅವರಿಗೆ ಬಿಜೆಪಿಗೆ ಆಹ್ವಾನ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವ ಅಶ್ವತ್ಥನಾರಾಯಣ ಬಳಿಕ ಇದೀಗ ಸಚಿವ ಗೋವಿಂದ ಕಾರಜೋಳ ಕೂಡ ಭವಾನಿ ರೇವಣ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಾರಜೋಳ, ಭವಾನಿ ರೇವಣ್ಣ ಬಿಜೆಪಿಗೆ ಬಂದರೆ ಸ್ವಾಗತ. ಬಿಜೆಪಿ ನಿಂತ ನೀರಲ್ಲ, ಹರಿಯುವ ನದಿಯಿದ್ದಂತೆ. ಹರಿಯುವ ನದಿಗೆ ಹೊಸ ನೀರು ಬಂದರೆ ಸ್ವಾಗತ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನ ಜೆಡಿಎಸ್ ಟಿಕೆಟ್ ಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ದೇವೇಗೌಡರ ಕುಟುಂಬದಲ್ಲಿಯೇ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಭವಾನಿ ರೇವಣ್ಣ ಅವರಿಗೆ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular