HomeKarnatakaBREAKING NEWS: ನೀರಿನ ಸಂಪ್ ಗೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ

BREAKING NEWS: ನೀರಿನ ಸಂಪ್ ಗೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ

ಬೆಳಗಾವಿ: ವಾಲ್ಮೀಕಿ ಭವನದ ನಿರ್ಮಾಣ ಹಂತದ ಸಂಪ್ ಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೂರ್ಲಹೊಸೂರ ಕಾಲೋನಿಯಲ್ಲಿ ನಡೆದಿದೆ.

ನಾಲ್ಕು ವರ್ಷದ ಶ್ಲೋಕ ಗುಡಿ ಹಾಗೂ ಚಿದಾನಂದ ಸಾಳುಂಕೆ ಮೃತ ಮಕ್ಕಳು. ಪ್ರಗತಿಪೂರ್ವ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳು ಇಂದು ಮಧ್ಯಾಹ್ನ ಆಟವಾಡಲು ಶಾಲೆಯಿಂದ ಹೊರಬಂದಿದ್ದಾರೆ. ಈ ವೇಳೆ ವಾಲ್ಮೀಕಿ ಭವನದ ನಿರ್ಮಾಣ ಹಂತದಲ್ಲಿದ್ದ ನೀರಿನ ಸಂಪ್ ನಲ್ಲಿ ಬಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular