HomeLatest Newsಕಡಲೆ ಬೇಳೆ ಬೇಯಿಸಲು ಗಂಟೆಗಟ್ಟಲೆ ಸಮಯ ಬೇಕೇ? ಇಲ್ಲಿದೆ ಸರಳ ಹಾಗೂ ವೇಗದ ಅಡುಗೆ ಟಿಪ್ಸ್!

ಕಡಲೆ ಬೇಳೆ ಬೇಯಿಸಲು ಗಂಟೆಗಟ್ಟಲೆ ಸಮಯ ಬೇಕೇ? ಇಲ್ಲಿದೆ ಸರಳ ಹಾಗೂ ವೇಗದ ಅಡುಗೆ ಟಿಪ್ಸ್!

ಭಾರತೀಯರ ದೈನಂದಿನ ಆಹಾರ ಪದ್ಧತಿಯಲ್ಲಿ ಬೇಳೆಗೆ ಅತ್ಯಂತ ಮುಖ್ಯವಾದ ಸ್ಥಾನವಿದೆ. ರೋಟಿ ಅಥವಾ ಬಿಸಿಯಾದ ಅನ್ನದೊಂದಿಗೆ ಬೇಳೆ ಸಾರು ಇದ್ದರೆ ಊಟದ ರುಚಿಯೇ ಬೇರೆ. ಆರೋಗ್ಯಕ್ಕೆ ಬೇಕಾದ ಪ್ರೊಟೀನ್ ಹಾಗೂ ಪೋಷಕಾಂಶಗಳನ್ನು ಒದಗಿಸುವ ಬೇಳೆಕಾಳುಗಳಲ್ಲಿ ಕಡಲೆ ಬೇಳೆಯೂ ಒಂದಾಗಿದೆ. ಆದರೆ ತೊಗರಿ ಬೇಳೆ, ಹೆಸರು ಬೇಳೆ ಅಥವಾ ಮಸೂರ್ ಬೇಳೆಗೆ ಹೋಲಿಸಿದರೆ ಕಡಲೆ ಬೇಳೆ ಬೇಯಲು ಕೊಂಚ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಕಡಲೆ ಬೇಳೆ ಬೇಯಲು ತಡವಾಗಲು ಕಾರಣವೇನು?

ಕಡಲೆ ಬೇಳೆಯು ಕಪ್ಪು ಕಡಲೆಯ ಸಿಪ್ಪೆ ತೆಗೆದು ಮಾಡುವ ಬೇಳೆಯಾಗಿದೆ. ಕಪ್ಪು ಕಡಲೆಯು ಮೂಲತಃ ಗಟ್ಟಿಯಾದ ಕಾಯಿಯಾಗಿದ್ದು, ಅದನ್ನು ಬೇಳೆ ಮಾಡಿದ ಮೇಲೆಯೂ ಅದರ ಜೀವಕೋಶಗಳ ರಚನೆ ಗಟ್ಟಿಯಾಗಿಯೇ ಇರುತ್ತದೆ. ಹೀಗಾಗಿ ಇದು ನೀರನ್ನು ಬೇಗನೆ ಹೀರಿಕೊಳ್ಳುವುದಿಲ್ಲ. ಹೆಸರು ಬೇಳೆ ಅಥವಾ ಮಸೂರ್ ಬೇಳೆಗಳು ಬೇಗನೆ ನೀರನ್ನು ಹೀರಿಕೊಂಡು ಮೆತ್ತಗಾಗುತ್ತವೆ, ಆದರೆ ಕಡಲೆ ಬೇಳೆಯಲ್ಲಿ ನೀರು ಹೀರಿಕೊಳ್ಳುವ ಸಾಮರ್ಥ್ಯ ನಿಧಾನವಾಗಿರುತ್ತದೆ. ಅಲ್ಲದೆ ಇದರಲ್ಲಿ ಸಂಕೀರ್ಣ ಶರ್ಕರಪಿಷ್ಟ ಹಾಗೂ ಪ್ರೊಟೀನ್ ಅಂಶ ಹೆಚ್ಚಿರುವುದರಿಂದ ಸಂಪೂರ್ಣವಾಗಿ ಬೆರೆತು ಮೆತ್ತಗಾಗಲು ಹೆಚ್ಚಿನ ಶಾಖ ಮತ್ತು ಸಮಯದ ಅಗತ್ಯವಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಡಲೆ ಬೇಳೆಯನ್ನು ಬೇಗನೆ ಬೇಯಿಸುವ ಸರಳ ಉಪಾಯಗಳು:

೧. ನೆನೆಸಿಡುವುದು: ಕಡಲೆ ಬೇಳೆಯನ್ನು ಅಡುಗೆ ಮಾಡುವ ಕನಿಷ್ಠ ಅರ್ಧ ಗಂಟೆಗೂ ಮುನ್ನ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿಡಬೇಕು. ಹೀಗೆ ಮಾಡುವುದರಿಂದ ಬೇಳೆ ನೀರನ್ನು ಬೇಗನೆ ಹೀರಿಕೊಂಡು ಬೇಯುವ ಸಮಯ ಕಡಿಮೆಯಾಗುತ್ತದೆ.

೨. ಅಡುಗೆ ಸೋಡಾ ಬಳಕೆ: ಸಮಯ ಅಭಾವವಿದ್ದಾಗ ಬೇಳೆ ಬೇಯಿಸುವಾಗ ಚಿಟಿಕೆ ಅಡುಗೆ ಸೋಡಾ ಸೇರಿಸಬಹುದು. ಇದು ಬೇಳೆಯ ನಾರುಗಳನ್ನು ಬೇಗನೆ ಸಡಿಲಗೊಳಿಸಿ ಬೇಯಲು ನೆರವಾಗುತ್ತದೆ.

೩. ಬಿಸಿ ನೀರಿನ ಬಳಕೆ: ಪ್ರೆಷರ್ ಕುಕ್ಕರ್‌ನಲ್ಲಿ ಬೇಳೆ ಬೇಯಿಸಲು ಇಡುವಾಗ ತಣ್ಣೀರಿನ ಬದಲು ಕುದಿಬಂದ ನೀರನ್ನು ಬಳಸಿದರೆ ಬೇಳೆ ಬೇಗನೆ ಬೇಯುತ್ತದೆ.

ರುಚಿಕರ ಕಡಲೆ ಬೇಳೆ ಸಾರು ಮಾಡುವ ವಿಧಾನ:

ಮೊದಲು ಬೇಯಿಸಿಕೊಂಡ ಕಡಲೆ ಬೇಳೆಯನ್ನು ಬದಿಗಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಒಗ್ಗರಣೆ ಕೊಡಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರೆಗೆ ಬೇಯಿಸಿ.

ಈ ಮಿಶ್ರಣಕ್ಕೆ ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಜೀರಿಗೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಣ್ಣೆ ತೇಲುವವರೆಗೆ ಚನ್ನಾಗಿ ಬಾಡಿಸಿ. ಈಗ ಬೇಯಿಸಿಟ್ಟ ಕಡಲೆ ಬೇಳೆಯನ್ನು ಈ ಮಸಾಲೆಗೆ ಸೇರಿಸಿ ಚೆನ್ನಾಗಿ ಬೆರೆಸಿ. ಅಗತ್ಯವಿದ್ದರೆ ಸ್ವಲ್ಪ ಬಿಸಿ ನೀರು ಸೇರಿಸಿ ಕೆಲ ನಿಮಿಷ ಕುದಿಸಿ. ಕೊನೆಯಲ್ಲಿ ಗರಂ ಮಸಾಲೆ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಕಡಲೆ ಬೇಳೆ ಸಾರು ಸಿದ್ಧ. ಇದನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ಸವಿಯಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular