HomeLatest Newsಬಾಲ್‌ ಬ್ಯಾಟ್‌ ಗೆ ಟಚ್ ಆದರೂ ವೈಡ್ ಅಂದ ಅಂಪೈಯರ್; ಬಿಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ಒಂದಾದ...

ಬಾಲ್‌ ಬ್ಯಾಟ್‌ ಗೆ ಟಚ್ ಆದರೂ ವೈಡ್ ಅಂದ ಅಂಪೈಯರ್; ಬಿಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ಒಂದಾದ ಮೇಲೆ ಒಂದು ಎಡವಟ್ಟು

WATCH: Bangladesh Premier League umpire signals a wide despite ball hitting batter's inside-edgeಭಾರತದಲ್ಲಿ ಹೇಗೆ ಐಪಿಎಲ್ ಫೇಮಸ್ಸೋ, ಅದೇ ರೀತಿ ಬಾಂಗ್ಲಾದಲ್ಲಿ ಬಿಪಿಎಲ್ ಫೇಮಸ್. ಈಗ ಅಲ್ಲಿ ಟಿ20 ಟೂರ್ನಿ ಆರಂಭವಾಗಿದ್ದು, ಎಲ್ಲ ತಂಡಗಳು ಕಪ್ ಗೆಲ್ಲುವುದಕ್ಕಾಗಿ ಒಬ್ಬರಿಗೊಬ್ಬರು ಟಕ್ಕರ್ ಕೊಡ್ತಿದ್ದಾರೆ. ಬಾಂಗ್ಲಾದೇಶದ ಹಲವು ದಿಗ್ಗಜ ಆಟಗಾರರು ಸೇರಿದಂತೆ ವಿಶ್ವ ಕ್ರಿಕೆಟ್‌ನ ಪ್ರಸಿದ್ಧ ಆಟಗಾರರು ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈಗ ಇದೇ ಬಾಂಗ್ಲಾ ಪ್ರೀಮಿಯರ್ ಲೀಗ್‌ನಲ್ಲಿ ಅಂಪೈಯರ್ ಮಾಡೋ ಎಡವಟ್ಟುಗಳು, ದೊಡ್ಡ ತಲೆನೋವಾಗಿದೆ.

ಬೌಲರ್ ಮಹೇದಿ ಮೂರನೇ ಓವರ್‌ನಲ್ಲಿ ಚೆಂಡೊಂದನ್ನ ಎದುರಾಳಿ ಬ್ಯಾಟ್‌ಮನ್‌ಗೆ ಹಾಕಿದ್ದಾರೆ. ಆದರೆ ಆ ಚೆಂಡು ಆಫ್‌ದಿ ಸ್ಟಂಪ್ ಹೋಗಿದೆ. ಆದರೂ ಬ್ಯಾಟ್‌ಮನ್‌ನ ಬ್ಯಾಟ್ ಆ ಚೆಂಡಿಗೆ ಟಚ್ ಆಗಿದೆ. ಆ ನಂತರ ಆ ಚೆಂಡು ನೆಲಕ್ಕೆ ತಾಕಿ ಕೊನೆಗೆ ವಿಕೆಟ್‌ಕಿಪರ್ ಹಿಂದೆ ಹೋಗಿ ಬೀಳುತ್ತೆ. ಕೊನೆಗೆ ವಿಕೆಟ್‌ಕಿಪರ್ ಓಡಿ ಹೋಗಿ ಅದನ್ನ ಹಿಡಿಯುತ್ತಾನೆ.

ಅಷ್ಟರೊಳಗೆ ಬ್ಯಾಟ್‌ಮನ್‌ ಓಡಿ ಒಂದು ರನ್ ಗಳಿಸುತ್ತಾನೆ. ಆದರೆ ನಾನ್‌ಸ್ಟ್ರೈಕ್ ಬಳಿ ಇದ್ದ ಅಂಪೈರ್ ಮಾತ್ರ ಆ ಚೆಂಡನ್ನ ವೈಯ್ಡ್ ಎಂದು ಕೈ ಎತ್ತಿ ಘೋಷಿಸುತ್ತಾನೆ. ಆ ಕ್ಷಣ ಬೌಲರ್ ಮಹದಿ ಹಸನ್ ಶಾಕ್ ಆಗಿ, ಅಂಪೈರ್‌ನ ಆ ನಿರ್ಧಾರವನ್ನ ವಿರೋಧಿಸುತ್ತಾರೆ. ಆದರೆ ಅಂಪೈರ್ ಆ ನಿರ್ಧಾರವನ್ನ ಸರಿಯಾಗಿದೆ ಎಂದು ವಾದ ಮಾಡುತ್ತಾ. ‘ಬೌಲರ್ ಚೆಂಡು ಎಸೆಯುವಾಗ ತನ್ನ ಮುಂದೆ ಬಂದಿದ್ದ. ಆದ್ದರಿಂದ ತನಗೆ ಬ್ಯಾಟ್‌ಮನ್‌ ಬಾಲ್‌ಗೆ ಬ್ಯಾಟ್ ಟಚ್ ಮಾಡಿದ್ದು ಕಾಣಿಸಿಲ್ಲ’ ಎಂದು ವಾದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಪಿಎಲ್‌ನಲ್ಲಿಯುತ್ತಿರುವ ಕೆಟ್ಟ ಅಂಪೈರಿಂಗ್‌ಗೆ ಸಾಕ್ಷಿಯಾಗಿದೆ. ಕೆಲವೇ ದಿನಗಳ ಹಿಂದಷ್ಟೆ ಬಾಂಗ್ಲಾದೇಶದ ಕಪ್ಪನ್ ಶಕೀಲ್ ಅವರು ಕೂಡಾ ಪಂದ್ಯ ನಡೆಯುವಾಗಲೂ ಅಂಪೈರ್‌ ಕೊಟ್ಟ ತಪ್ಪು ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದ ಘಟನೆ ನೆನಪಾಗುತ್ತೆ.

For Latest News Updates, Join Our Whatsapp Community🚩
RELATED ARTICLES

Most Popular