alex Certify ಕೊಳವೆ ರಿಪೇರಿ ಮಾಡುತ್ತಿದ್ದವನನ್ನು ಕಳ್ಳನೆಂದು ಭಾವಿಸಿ ಗುಂಡಿಕ್ಕಿ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳವೆ ರಿಪೇರಿ ಮಾಡುತ್ತಿದ್ದವನನ್ನು ಕಳ್ಳನೆಂದು ಭಾವಿಸಿ ಗುಂಡಿಕ್ಕಿ ಕೊಲೆ

ಟೆಕ್ಸಾಸ್: ಇಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಗೊಂದಲಕ್ಕೀಡಾಗಿ ಪ್ಲಂಬರ್ ಒಬ್ಬನನ್ನು ಮನೆಯ ಮಾಲೀಕರು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ವರದಿಗಳ ಪ್ರಕಾರ, 53 ವರ್ಷದ ಸೀಸರ್ ಮೊಂಟೆಲೊಂಗೊ ಹತ್ಯೆಗೀಡಾದವನು. ಈತ ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀಯಲ್ಲಿರುವ ಕ್ಲೇಟನ್ ಪಾಯಿಂಟ್ ಅಪಾರ್ಟ್‌ಮೆಂಟ್‌ನಲ್ಲಿ ಬಾಲ್ಕನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಂಜೆ 6 ಗಂಟೆ ಸುಮಾರಿಗೆ ನಿವಾಸಿಯೊಬ್ಬರು ಅವರನ್ನು ಗಮನಿಸಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ಕಾಂಪ್ಲೆಕ್ಸ್‌ನಲ್ಲಿರುವ ಹಲವಾರು ಪೈಪ್‌ಗಳು ಒಡೆದ ನಂತರ ಈತನನ್ನು ಸೇವೆಗೆ ಕರೆಸಲಾಗಿತ್ತು. ಇದನ್ನು ಮನೆ ಮಾಲೀಕರೊಬ್ಬರು ನೋಡಿದ್ದಾರೆ. ಕಳ್ಳನೆಂದು ತಪ್ಪಾಗಿ ಭಾವಿಸಿ ಕಿಟಕಿಯ ಮೂಲಕ ಬಂದೂಕಿನಿಂದ ಶೂಟ್ ಮಾಡಿದ್ದಾರೆ. ಆತ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...