
ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.
ತಾಯಿ ಕಪ್ಪು ಕಾರಿನಲ್ಲಿ ಬಂದಾಗ ಮಗಳು ತನ್ನ ಗ್ಯಾರೇಜ್ ಮುಂದೆ ನೆಲದ ಮೇಲೆ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೂಡಲೆ ತಾಯಿ ತನ್ನ ಕಾರಿನಿಂದ ಇಳಿದು, ಮಗಳ ಬಳಿಗೆ ಬಂದು ಕಾಂಕ್ರೀಟ್ ಮೇಲೆ ಅವಳ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ. ನಂತರ ತನ್ನ ಮಗಳ ಕೈಗಳನ್ನು ಹಿಡಿದುಕೊಂಡು ಮಳೆಯಲ್ಲಿ ಮೌನವಾಗಿ ಅವಳ ಪಕ್ಕದಲ್ಲಿ ಮಲಗುತ್ತಾಳೆ.
ಟ್ವಿಟ್ಟರ್ ಬಳಕೆದಾರ ತನ್ಸು ಯೆಗೆನ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ, ಮಗಳು ರಸ್ತೆಯಲ್ಲಿ ಮಳೆಯಲ್ಲಿ ಮಲಗಿದ್ದನ್ನು ಕಂಡು ಕೋಪಗೊಳ್ಳುವ ಬದಲು, ಅವಳು ಕುಳಿತು, ತನ್ನ ಮಗಳ ಕೈಯನ್ನು ಹಿಡಿದು, ಅವಳ ಆತಂಕ ಕಡಿಮೆಯಾಗುವವರೆಗೂ ಅವಳೊಂದಿಗೆ ಮಲಗಿರುವುದನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಮಕ್ಕಳಿಗೆ ಈ ರೀತಿ ಸಾಂತ್ವನ ಮಾಡಬೇಕು ಎಂದಿದ್ದಾರೆ.