ಸಾಮಾನ್ಯವಾಗಿ ಹಣ್ಣು ತರಕಾರಿಗಳು, ಉಳಿದ ಆಹಾರ ಪದಾರ್ಥಗಳನ್ನೆಲ್ಲ ನಾವು ಫ್ರಿಡ್ಜ್ನಲ್ಲಿಡುತ್ತೇವೆ. ಅದು ಕೆಟ್ಟು ಹೋಗದಂತೆ ರಕ್ಷಿಸಿಕೊಳ್ಳುವುದು ನಮ್ಮ ಉದ್ದೇಶ. ಜೊತೆಗೆ ಫ್ರಿಡ್ಜ್ನಲ್ಲಿಟ್ಟರೆ ಆಹಾರ ತಾಜಾ ಆಗಿರುತ್ತದೆ. ಆದರೆ ಆಹಾರವನ್ನು ಫ್ರಿಜ್ನಲ್ಲಿ ಇಡುವಾಗ ಬಹಳ ಜಾಗರೂಕರಾಗಿರಬೇಕು.
ಏಕೆಂದರೆ ಕೆಲವೊಂದು ಪದಾರ್ಥಗಳನ್ನು ಫ್ರಿಡ್ಜ್ನಲ್ಲಿಟ್ಟು ಸೇವಿಸುವುದು ಅಪಾಯಕಾರಿ. ಅದು ನಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಫ್ರಿಡ್ಜ್ನಲ್ಲಿಡಬಾರದು.
ಟೊಮೇಟೊ: ಅನೇಕರು ಟೊಮೇಟೊವನ್ನು ಫ್ರಿಡ್ಜ್ನಲ್ಲಿ ಇಡುತ್ತಾರೆ. ಆದರೆ ಫ್ರಿಡ್ಜ್ನಲ್ಲಿಟ್ಟರೆ ಅದರ ಸುವಾಸನೆ, ರುಚಿ ಮತ್ತು ರಸ ಎಲ್ಲವೂ ಹೊರಟುಹೋಗುತ್ತದೆ. ಅದರಲ್ಲಿರುವ ಪೋಷಕಾಂಶಗಳು ಕೂಡ ನಾಶವಾಗುತ್ತವೆ. ಟೊಮೆಟೊಗಳನ್ನು ಸಾಮಾನ್ಯ ಉಷ್ಣಾಂಶದಲ್ಲಿ ಸಂಗ್ರಹಿಸಬೇಕು.
ಆಲೂಗಡ್ಡೆ: ಆಲೂಗಡ್ಡೆಯನ್ನು ಕೂಡ ಫ್ರಿಡ್ಜ್ನಲ್ಲಿ ಇಡಬೇಡಿ. ಇದನ್ನೂ ರೂಮ್ ಟೆಂಪ್ರೇಚರ್ನಲ್ಲಿಯೇ ಶೇಖರಣೆ ಮಾಡಬೇಕು. ಆಗ ಮಾತ್ರ ಅದರ ರುಚಿ ಮತ್ತು ಪೋಷಕಾಂಶಗಳು ಹಾಗೇ ಉಳಿಯುತ್ತವೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಫ್ರಿಡ್ಜ್ನಲ್ಲಿಟ್ಟರೆ ಅವು ಒಳಗಿನಿಂದ ರಬ್ಬರ್ನಂತಾಗಿಬಿಡುತ್ತವೆ. ಹಾಗಾಗಿ ಅದನ್ನು ಫ್ರಿಡ್ಜ್ನಲ್ಲಿಡುವ ಬದಲು ಒಣ ಮತ್ತು ತಂಪಾದ ಸ್ಥಳದಲ್ಲಿ ಇರಿಸಿ.
ಕ್ಯಾಪ್ಸಿಕಂ: ಸಾಮಾನ್ಯವಾಗಿ ಎಲ್ಲರೂ ಕ್ಯಾಪ್ಸಿಕಂ ಅನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿಡುತ್ತಾರೆ. ಆದ್ರೆ ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ. ಏಕೆಂದರೆ ಕಡಿಮೆ ತಾಪಮಾನದಲ್ಲಿ ಕ್ಯಾಪ್ಸಿಕಂ ಚರ್ಮವು ಮೃದುವಾಗುತ್ತದೆ. ಅದರ ರುಚಿಯನ್ನು ಕೊಲ್ಲುತ್ತದೆ.
ಈರುಳ್ಳಿ: ಈರುಳ್ಳಿಯನ್ನು ಸಹ ಫ್ರಿಡ್ಜ್ನಲ್ಲಿ ಇಡಬಾರದು. ಫ್ರಿಡ್ಜ್ನಲ್ಲಿಟ್ಟರೆ ಅದರ ತೇವಾಂಶ ಹೊರಟುಹೋಗುತ್ತದೆ. ಫ್ರಿಡ್ಜ್ನಲ್ಲಿ ಮಾತ್ರವಲ್ಲ ಪ್ಲಾಸ್ಟಿಕ್ ಚೀಲ ಅಥವಾ ಕವರ್ನಲ್ಲಿ ಕೂಡ ಈರುಳ್ಳಿಯನ್ನು ಇಡಬೇಡಿ.