
ಹಾವಿನ ಕೋಪ ಹನ್ನೆರಡು ವರುಷ ಅನ್ನೋ ಮಾತಿದೆ. ಅದೇ ರೀತಿ ಸಿಟ್ಟಿಗೆದ್ದ ಹಾವು ಕೋಪ ತೋರಿಸಿಬಿಡುತ್ತೆ. ಕಾರ್ ನಲ್ಲಿ ಕುಳಿತು ನಾಗರಹಾವಿನ ಮೇಲೆ ಗುಂಡು ಹಾರಿಸಿದವನ ಮೇಲೆ ಹಾವು ಹಾರಿ ಬಿದ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೆಚ್ಚಿಬೀಳಿಸಿದೆ.
ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಕ್ಲಿಪ್‌ನಲ್ಲಿ, ವ್ಯಕ್ತಿಯೊಬ್ಬ ಗನ್ ಹಿಡಿದುಕೊಂಡು ತನ್ನ ಕಾರಿನೊಳಗೆ ಕುಳಿತಿರುವುದು ಕಂಡುಬರುತ್ತದೆ. ಅವನು ಬಂದೂಕಿನಿಂದ ನೆಲದ ಮೇಲೆ ನಾಗರ ಹಾವಿನತ್ತ ಗುರಿಯಿಟ್ಟು ಒಮ್ಮೆ ಗುಂಡು ಹಾರಿಸುತ್ತಾನೆ. ಸರ್ಪವು ತನ್ನ ತಲೆಯನ್ನು ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಮುಂದಾಗುತ್ತದೆ.
ಮತ್ತೊಮ್ಮೆ ವ್ಯಕ್ತಿ ಗುಂಡು ಹಾರಿಸಿದಾಗ, ನಾಗರಹಾವು ತಕ್ಷಣವೇ ಅವನ ಮೇಲೆ ದಾಳಿ ಮಾಡುತ್ತದೆ. ಗಾಬರಿಗೊಂಡ ವ್ಯಕ್ತಿ ಕಿರುಚುತ್ತಾ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. “ನಾಗರ ಕಾಳಗಕ್ಕೆ ಬಂದೂಕು ತರಬೇಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆ ಗಳಿಸಿದೆ.