ಸರ್ ವಿನ್‌ಸ್ಟನ್ ಚರ್ಚಿಲ್ ಯಾವುದೇ ರೀತಿಯಲ್ಲಿ ಬಂಗಾಳದ ಕ್ಷಾಮಕ್ಕೆ ಕೊಡುಗೆ ನೀಡಿಲ್ಲ ಎಂದು ಹೇಳುವ ಮೂಲಕ ಇತಿಹಾಸಕಾರ ಆಂಡ್ರಿಯಾಸ್ ಕೌರಿಯಾಸ್ ಎಂಬ ಅಹಿಸ್ಟೋರಿಯನ್ ಈಗ ಸುದ್ದಿಯಾಗಿದ್ದಾರೆ. ಬ್ರಿಟೀಷ್ ರಾಜಕಾರಣಿ, ಮುತ್ಸದ್ದಿ, ಉತ್ತಮ ವಾಗ್ಮಿ, ಇತಿಹಾಸಕಾರ, ಬರಹಗಾರ, ಕಲಾವಿದ ಎಂದೇ ಪ್ರಸಿದ್ಧಿ ಹೊಂದಿರುವ ಚರ್ಚಿಲ್ ಕುರಿತು ಹೊಸ ವಿವಾದ ಹುಟ್ಟುಹಾಕಿದ್ದಾರೆ.
01/03/1944 ರಂದು, ಚರ್ಚಿಲ್ ಅವರ ಯುದ್ಧ ಕ್ಯಾಬಿನೆಟ್ ಬಂಗಾಳ ಕೊಲ್ಲಿಯಲ್ಲಿ ಸಂಭಾವ್ಯ ಜಪಾನಿನ ಯುದ್ಧನೌಕೆ/ವಾಹಕ ನೌಕೆಯ ದಾಳಿಗೆ ಹೇಗೆ ವರ್ತಿಸಿತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
“ಚರ್ಚಿಲ್ ಅವರು ಮಾಲ್ಡೀವ್ಸ್ ಸಮೀಪದಿಂದ ಬರ್ಮಾದ ದಕ್ಷಿಣ ಕರಾವಳಿಯವರೆಗೂ ಪ್ರದೇಶವನ್ನು ಸುತ್ತುವರೆದಿದ್ದರು. ಅಕ್ಟೋಬರ್ 1942 ರ ಚಂಡಮಾರುತವು ರಸ್ತೆಗಳು, ಟೆಲಿಕಾಂ ವ್ಯವಸ್ಥೆಗಳು ಮತ್ತು ರೈಲುಮಾರ್ಗಗಳನ್ನು ಹಾನಿಗೊಳಿಸಿತು” ಎಂದು ಅವರು ಬರೆದಿದ್ದಾರೆ.
ಆದರೆ ನೆಟಿಜನ್‌ಗಳು ಈ ಮಾತನ್ನು ಒಪ್ಪುತ್ತಿಲ್ಲ. ಹಲವರು ಈ ವಾದದ ವಿರುದ್ಧ ಮಾತನಾಡಿದ್ದಾರೆ. ಆದರೆ ಕೆಲವರು ಮಾತ್ರ “ಖಂಡಿತ! ವಿನ್‌ಸ್ಟನ್ ಚರ್ಚಿಲ್, ನಾಜಿಗಳಿಗಿಂತ 20 ಪಟ್ಟು ಹೆಚ್ಚು ದುಷ್ಟ ಬ್ರಿಟಿಷ್ ವ್ಯಕ್ತಿ. ಈತ ಹಿಟ್ಲರ್‌ಗಿಂತ ಕೆಟ್ಟ ಮಾನವ ಎಂದಿದ್ದಾರೆ. ಒಟ್ಟಿನಲ್ಲಿ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
https://twitter.com/iamMarketWiz/status/1607305681878781954?ref_src=twsrc%5Etfw%7Ctwcamp%5Etwee