alex Certify ರಸ್ತೆ ಬದಿ ಗಿಟಾರ್‌ ಬಾರಿಸುವಾಗ ಪ್ರೇಕ್ಷಕರಾದ ಪೊಲೀಸರು: ನೆಟ್ಟಿಗರ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಬದಿ ಗಿಟಾರ್‌ ಬಾರಿಸುವಾಗ ಪ್ರೇಕ್ಷಕರಾದ ಪೊಲೀಸರು: ನೆಟ್ಟಿಗರ ಶ್ಲಾಘನೆ

ಮುಂಬೈನ ರಸ್ತೆಯ ಬಸ್ ನಿಲ್ದಾಣದ ಬಳಿ ಗಿಟಾರ್‌ನಲ್ಲಿ ಕೇಸರಿಯಾ ಹಾಡನ್ನು ನುಡಿಸುತ್ತಿದ್ದ ಸಂಗೀತ ಕಲಾವಿದನಿಗೊಂದು ಅಚ್ಚರಿಯ ಘಟನೆ ನಡೆದಿದ್ದು, ಅದೀಗ ವೈರಲ್‌ ಆಗಿದೆ.

ಈತ ಗಿಟಾರ್ ನುಡಿಸುವಾಗ ಇಬ್ಬರು ಯುವಕರನ್ನು ಹೊರತುಪಡಿಸಿ, ಪ್ರೇಕ್ಷಕರಾಗಿ ನಿಂತವರು ಮುಂಬೈ ಪೊಲೀಸರು! ಒಬ್ಬರು ಮೋಟಾರ್‌ಸೈಕಲ್‌ನಲ್ಲಿ ಕುಳಿತಿದ್ದರೆ, ಇನ್ನೊಬ್ಬರು ಕಲಾವಿದರ ಪಕ್ಕದಲ್ಲಿ ನಿಂತಿದ್ದರು. ಅರೆಕ್ಷಣ ಕಲಾವಿದ ದಂಗಾಗಿರುವಂತೆ ಕಂಡಿತು.

ಆದರೆ ಆ ಪೊಲೀಸರು ಸಂಗೀತ ಆಸ್ವಾದಿಸುತ್ತಿದ್ದರು. ಪೋಲೀಸರ ನಗು ಎಲ್ಲರ ಮನ ಗೆದ್ದಿದೆ. ಇದರ ವಿಡಿಯೋ ವೈರಲ್‌ ಆಗಿದೆ.

ನಾವು ನಿಮ್ಮೊಂದಿಗಿದ್ದೇವೆ ಎಂದು ಮುಂಬೈ ಪೊಲೀಸರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು, ನೆಟ್ಟಿಗರ ಮನ ಗೆದ್ದಿದ್ದಾರೆ. “ಮುಂಬೈ ಪೊಲೀಸರು ಖಂಡಿತವಾಗಿಯೂ ಉತ್ತಮರು. ಯಾವಾಗಲೂ ನಿಮ್ಮ ದಯೆಯನ್ನು ಅನುಭವಿಸಿದ್ದೇನೆ, ಧನ್ಯವಾದಗಳು” ಎಂದು ಹಲವರು ಕೃತಜ್ಞತೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...