alex Certify ಅಪ್ಪ – ಅಮ್ಮ ಮಗುವಿನ ಹುಟ್ಟುಹಬ್ಬ ಒಂದೇ ದಿನ: ಅಮೆರಿಕದಲ್ಲೊಂದು ಕೌತುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪ – ಅಮ್ಮ ಮಗುವಿನ ಹುಟ್ಟುಹಬ್ಬ ಒಂದೇ ದಿನ: ಅಮೆರಿಕದಲ್ಲೊಂದು ಕೌತುಕ

ಇಡೀ ಕುಟುಂಬವು ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇದೀಗ ವೈರಲ್‌ ಆಗಿದೆ.

ಅಲಬಾಮಾದ ಹಂಟ್ಸ್‌ವಿಲ್ಲೆಯ ಅಮೆರಿಕನ್ ದಂಪತಿ ಮತ್ತು ಅವರ ಮಗು ಇಂಥದ್ದೊಂದು ಹುಟ್ಟುಹಬ್ಬದ ಸುದ್ದಿ ಮಾಡಿದ್ದಾರೆ. ಅಂದರೆ, ಈಗ ಇಡೀ ಕುಟುಂಬ ಒಂದೇ ಹುಟ್ಟುಹಬ್ಬವನ್ನು ಹಂಚಿಕೊಳ್ಳುತ್ತದೆ.

ಈ ದಂಪತಿಗೆ ಡಿಸೆಂಬರ್ 18ರಂದು ಮಗಳು ಲೆನ್ನನ್ ಜನಿಸಿದಳು. ಈ ಮೊದಲು ದಂಪತಿಯ ಹುಟ್ಟುಹಬ್ಬ ಡಿ.18 ಆಗಿತ್ತು. ಈಗ ಮಗುವಿನ ಹುಟ್ಟುಹಬ್ಬವೂ ಅದೇ ದಿನವಾಗಿದೆ.

ಇಂಥದ್ದೊಂದು ಅಪರೂಪದ ಘಟನೆ 1.33 ಲಕ್ಷದಲ್ಲಿ ಒಬ್ಬರ ಮನೆಯಲ್ಲಿ ಸಂಭವಿಸುತ್ತದೆ ಎನ್ನಲಾಗಿದೆ. ಹಂಟ್ಸ್‌ವಿಲ್ಲೆ ಆಸ್ಪತ್ರೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯ ತಿಳಿಸಿದೆ. “ತಮ್ಮ ಚೊಚ್ಚಲ ಮಗುವನ್ನು ಜಗತ್ತಿಗೆ ಸ್ವಾಗತಿಸಿದ ಕ್ಯಾಸಿಡಿ ಮತ್ತು ಡೈಲನ್ ಸ್ಕಾಟ್ ಅವರಿಗೆ ಅಭಿನಂದನೆಗಳು! ಇದು ಯಾವುದೇ ಕುಟುಂಬಕ್ಕೆ ರೋಮಾಂಚನಕಾರಿ ಸಮಯವಾಗಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...