ಬೆಂಗಳೂರು: ರಾಜ್ಯ ಪೋಲಿಸ್ ಇಲಾಖೆಯ ಸಬ್ ಡಿವಿಷನ್ ಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಂಚಾರ, ಕಾನೂನು ಸುವ್ಯವಸ್ಥೆ ಠಾಣೆಗಳ ಸಬ್ ಡಿವಿಷನ್ ಗಳಲ್ಲಿ ಹೆಚ್ಚಳ ಮಾಡಲಾಗಿದೆ.
ರಾಜ್ಯ ಸರ್ಕಾರಕ್ಕೆ ಪೋಲಿಸ್ ಮಹಾನ್ ನಿರ್ದೇಶಕರು ಈ ಕುರಿತಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಸಬ್ ಡಿವಿಷನ್ ಗಳಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ಪಶ್ಚಿಮ ಸಂಚಾರ ಸಬ್ ಡಿವಿಷನ್ ಮಾರ್ಪಡಿಸಿ ಆದೇಶ ಹೊರಡಿಸಲಾಗಿದೆ. ಪಶ್ಚಿಮ ಸಂಚಾರ ಉಪ ವಿಭಾಗದ ಜೊತೆಗೆ ವಿಜಯನಗರ ಉಪ ವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್ ಡಿವಿಷನ್ ವಿಂಗಡಣೆ ಮಾಡಲಾಗಿದೆ. ಹೊಸದಾಗಿ ಹೆಚ್ಎಸ್ಆರ್ ಲೇಔಟ್ ಸಬ್ ಡಿವಿಷನ್ ಸೇರ್ಪಡೆ ಮಾಡಲಾಗಿದೆ.
ಉತ್ತರ ವಿಭಾಗದ ಯಶವಂತಪುರ ಸಬ್ ಡಿವಿಷನ್ ವಿಂಗಡಿಸಲಾಗಿದೆ. ಯಶವಂತಪುರ ಮತ್ತು ಪೀಣ್ಯ ಸಬ್ ಡಿವಿಷನ್ ಗಳಾಗಿ ಮಾರ್ಪಡಿಸಿ ಆದೇಶ ಹೊರಡಿಸಲಾಗಿದೆ. ಪಶ್ಚಿಮ ವಿಭಾಗದ ಕೆಂಗೇರಿ ಗೇಟ್, ವಿಜಯನಗರ ಸಬ್ ಡಿವಿಷನ್ ಮಾರ್ಪಾಡು ಮಾಡಲಾಗಿದೆ. ಹೊಸದಾಗಿ ಕೆಂಗೇರಿ ಸಬ್ ಡಿವಿಷನ್ ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ.
ಮೈಸೂರಿನ ನರಸಿಂಹರಾಜ, ಕೃಷ್ಣರಾಜ ಸಬ್ ಡಿವಿಷನ್ ಮಾರ್ಪಾಡು ಮಾಡಲಾಗಿದೆ. ಹೊಸದಾಗಿ ವಿಜಯನಗರ ಸಬ್ ಡಿವಿಷನ್ ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗದಲ್ಲಿ ಸಬ್ ಡಿವಿಷನ್ ಬದಲಾವಣೆ ಮಾಡಲಾಗಿದ್ದು, ಶಿವಮೊಗ್ಗ ಡಿವಿಜನ್ ಎ, ಬಿ ಸಬ್ ಡಿವಿಷನ್ ಎಂದು ಮಾರ್ಪಾಡು ಮಾಡಲಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಸಬ್ ಡಿವಿಷನ್ ನಲ್ಲಿ ಬದಲಾವಣೆ ಮಾಡಿ ಚನ್ನರಾಯಪಟ್ಟಣ ಸಬ್ ಡಿವಿಷನ್ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಮೂರು ಸಬ್ ಡಿವಿಷನ್ ಗಳಿಂದ ನಾಲ್ಕು ಸಬ್ ಡಿವಿಷನ್ ಗೆ ಏರಿಕೆ ಮಾಡಲಾಗಿದೆ. ಹೊಸದಾಗಿ ವಿಜಯಪುರ ಗ್ರಾಮಾಂತರ ಸಬ್ ಡಿವಿಷನ್ ಸೇರ್ಪಡೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಬ್ ಡಿವಿಷನ್ ಮಾರ್ಪಾಡು ಮಾಡಲಾಗಿದ್ದು, ಹೊಸದಾಗಿ ಬೆಳ್ತಂಗಡಿ ಸಬ್ ಡಿವಿಷನ್ ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ. ಸಬ್ ಡಿವಿಜನ್ ಗಳ ಪೊಲೀಸ್ ಠಾಣೆಗಳನ್ನು ಅದಲು ಬದಲು ಮಾಡಿ ಆದೇಶ ಹೊರಡಿಸಲಾಗಿದೆ.