ಸೀನು ಒಂದು ನೈಸರ್ಗಿಕ ಪ್ರಕ್ರಿಯೆ. ಮನುಷ್ಯ ಸೀನಿದ್ರೆ ಆರೋಗ್ಯ ಸರಿಯಾಗಿದೆ ಎಂದೇ ಅರ್ಥ.
ಆದ್ರೆ ಕೆಲವರು ಎಲ್ಲರ ಮುಂದೆ ಸೀನುವುದಿಲ್ಲ. ಮೀಟಿಂಗ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸೀನಿದ್ರೆ ಜನರು ಏನೆಂದುಕೊಳ್ಳುತ್ತಾರೋ ಎಂಬ ಭಯಕ್ಕೆ ಸೀನನ್ನು ತಡೆಯುತ್ತಾರೆ.
ತಜ್ಞರ ಪ್ರಕಾರ ಎಲ್ಲಿ, ಯಾವ ಪರಿಸ್ಥಿತಿಯಲ್ಲಿ ಬೇಕಾದ್ರೂ ಇರಿ, ಸೀನನ್ನು ಮಾತ್ರ ತಡೆಯಬೇಡಿ. ಸೀನು ಬಂದ್ರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅದೇ ಸೀನನ್ನು ತಡೆದ್ರೆ ಆರೋಗ್ಯ ಹಾಳಾಗುತ್ತದೆ. ಸಾಮಾನ್ಯವಾಗಿ ಹೊರಗಿನ ಧೂಳು ನಮ್ಮ ಮೂಗು ಸೇರಿದಾಗ ಸೀನು ಬರುತ್ತದೆ. ಸೀನಿದಾಗ ಹೊರಗಿನ ಧೂಳಿನ ಜೊತೆ ಬ್ಯಾಕ್ಟೀರಿಯಾ ಹೊರಗೆ ಬರುತ್ತದೆ.
ಸೀನಿದಾಗ ಮೂಗಿನಿಂದ 160 ಕಿ.ಮೀ /ಗಂಟೆ ವೇಗದಲ್ಲಿ ಗಾಳಿ ಹೊರಗೆ ಬರುತ್ತದೆ. ಸೀನನ್ನು ತಡೆದ್ರೆ ಈ ಒತ್ತಡ ನಮ್ಮ ದೇಹದ ಬೇರೆ ಭಾಗಗಳನ್ನು ಪ್ರವೇಶ ಮಾಡುತ್ತದೆ. ಸೀನು ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ಹೊರಗೆ ಹಾಕುತ್ತದೆ. ಸೀನನ್ನು ತಡೆದ್ರೆ ಬ್ಯಾಕ್ಟೀರಿಯಾ ಒಳಗೆ ಇದ್ದು ಅನೇಕ ರೋಗಗಳಿಗೆ ಕಾರಣವಾಗುತ್ತದೆ.
ಸೀನುವುದ್ರಿಂದ ಕಣ್ಣು ಹಾಗೂ ಗಂಟಲಿಗೂ ಲಾಭವಿದೆ. ಸೀನನ್ನು ತಡೆ ಹಿಡಿದಲ್ಲಿ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ. ಸೀನನ್ನು ಅನೇಕ ಬಾರಿ ತಡೆಯುತ್ತಿದ್ದರೆ ಇದು ಮೆದುಳಿನ ನರಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ಪ್ರಸ್ತುತ ಕೊರೊನಾ ಸಂದರ್ಭದಲ್ಲಿ ಸೀನುವಾಗ ಜನಸಂದಣಿ ಪ್ರದೇಶದಿಂದ ದೂರ ಹೋಗಿ. ಅಲ್ಲದೆ ಕರವಸ್ತ್ರದಿಂದ ಮೂಗು, ಬಾಯಿ ಮುಚ್ಚಿಕೊಳ್ಳಿ.