alex Certify ʼಹೊಸ ವರ್ಷʼ ತೂಕ ಇಳಿಸಿಕೊಳ್ಳಬೇಕೆಂದಿರುವವರಿಗೆ ಇಲ್ಲಿದೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೊಸ ವರ್ಷʼ ತೂಕ ಇಳಿಸಿಕೊಳ್ಳಬೇಕೆಂದಿರುವವರಿಗೆ ಇಲ್ಲಿದೆ ಸಲಹೆ

ಹೊಸ ವರ್ಷದ ಆಗಮನಕ್ಕೆ ತಯಾರಿ ನಡೆಯುತ್ತಿದೆ. ಹೊಸ ವರ್ಷ ಮಾಡಬೇಕಾದ ಕೆಲಸದ ಪಟ್ಟಿ ಸಿದ್ಧವಾಗ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಈ ಪಟ್ಟಿಯಲ್ಲಿ ತೂಕ ಇಳಿಸುವುದು ಇದ್ದೇ ಇರುತ್ತೆ. ಹೊಸ ವರ್ಷ ತೂಕ ಇಳಿಸುವ ಪ್ಲಾನ್ ನಲ್ಲಿ ನೀವಿದ್ದರೆ ಈ ಟಿಪ್ಸ್ ಪಾಲಿಸಿ. ಭಾರತದ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ಕೇವಲ ಆಹಾರದ ರುಚಿ ಹೆಚ್ಚಿಸುವುದಿಲ್ಲ. ಸಾಕಷ್ಟು ಔಷಧಿ ಗುಣವನ್ನು ಹೊಂದಿರುತ್ತವೆ. ನಿಮ್ಮ ತೂಕ ಇಳಿಕೆಗೂ ಅವು ನೆರವಾಗುತ್ತವೆ.

ಕೆಂಪು ಮೆಣಸಿನಕಾಯಿ ಎಲ್ಲರಿಗೂ ಗೊತ್ತು. ಖಾರದ ಅಡುಗೆಯಲ್ಲಿ ಇದು ಇರಲೇಬೇಕು.ಇದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.ಚಯಾಪಯಶಕ್ತಿ ಬಲ ಪಡೆಯುತ್ತದೆ.ನಿಮ್ಮ ದೇಹದ 100 ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ.ನಿಮ್ಮ ಹಸಿವನ್ನು ಇದು ಕಡಿಮೆ ಮಾಡುತ್ತದೆ.ದೇಹದ ಕೊಬ್ಬು ಇದ್ರಿಂದ ಕರಗುತ್ತದೆ.

ಜೀರಿಗೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುತ್ತದೆ. ಇದ್ರಲ್ಲಿ ಸಾಕಷ್ಟು ಔಷಧಿ ಗುಣವಿದೆ. ಜೀರಿಗೆ ತೂಕ ಇಳಿಸಿಕೊಳ್ಳಲು ಸಹಕಾರಿ.ಪ್ರತಿ ದಿನ ಬೆಳಿಗ್ಗೆ ಜೀರಿಗೆ ನೀರು ಸೇವನೆ ಮಾಡಿದ್ರೆ ತೂಕ ವೇಗವಾಗಿ ಇಳಿಯುತ್ತದೆ.

ಶುಂಠಿ ಕೂಡ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದ್ರಲ್ಲೂ ಔಷಧಿ ಗುಣವಿದೆ. ಹಸಿವನ್ನು ಕಡಿಮೆ ಮಾಡುತ್ತದೆ.ಚಯಾಪಚಯವನ್ನು ಸುಲಭಗೊಳಿಸುತ್ತದೆ.ದೇಹದಲ್ಲಿರುವ ಕೊಬ್ಬನ್ನು ಕರಗಿಸುವ ಕೆಲಸ ಮಾಡುತ್ತದೆ.

ಕರಿಮೆಣಸು ಕೊಬ್ಬು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೊಬ್ಬಿನ ಕೋಶಗಳು ರೂಪುಗೊಳ್ಳದಂತೆ ತಡೆಯುತ್ತದೆ.  ಕರಿಮೆಣಸು ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ.

ಅರಿಶಿನ  ರುಚಿ ಮತ್ತು ಬಣ್ಣಕ್ಕೆ ಪ್ರಸಿದ್ಧಿ ಪಡೆದಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಆಹಾರದಲ್ಲಿ ಅರಿಶಿನ ಬಳಕೆ ಹೆಚ್ಚು ಮಾಡಿ. ಹಾಲಿಗೆ ಹಾಕಿ ಇಲ್ಲವೆ ನೀರಿಗೆ ಹಾಕಿ ಅರಿಶಿನವನ್ನು ಸೇವಿಸಬಹುದು.

ಚಯಾಪಚಯ ಶಕ್ತಿಯನ್ನು ಬಲಪಡಿಸುವ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವ ಕೆಲಸವನ್ನು ದಾಲ್ಚಿನಿ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸಿದರೆ ಆಹಾರದಲ್ಲಿ ದಾಲ್ಚಿನ್ನಿ ಬಳಸಿ. ಚಹಾಕ್ಕೆ ದಾಲ್ಚಿನಿ ಹಾಕಿ ಸೇವನೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...