ಕೋವಿಡ್ ತವರು ಚೀನಾದಲ್ಲಿ ಮತ್ತೊಮ್ಮೆ ಹಂಗಾಮಾ ಸೃಷ್ಟಿಯಾಗಿದೆ. ಕೋವಿಡ್ನಿಂದ ಚೀನಾ ತತ್ತರಿಸಿ ಹೋಗಿದ್ದು, ಇತರ ದೇಶಗಳಿಗೂ ಭೀತಿ ಉಂಟಾಗಿದೆ.
ಇಂಥ ಸ್ಥಿತಿಯಲ್ಲಿ ಹಲವಾರು ನಿಯಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಹಾಸ್ಯದ ರೂಪದ ನಿಯಮವೊಂದು ಇದೀಗ ವೈರಲ್ ಆಗುತ್ತಿದೆ.
ಮಾಸ್ಕ್ ಬದಲು ಕೊಕ್ಕಿನ ಆಕಾರದ ವಿಶಿಷ್ಟ ಮುಖವಾಡವನ್ನು ಧರಿಸಿ ವ್ಯಕ್ತಿಯೊಬ್ಬರು ತಿನ್ನುವ ವಿಡಿಯೋ ಇದಾಗಿದೆ.
ಈ ವಿಡಿಯೋವನ್ನು ಅನಿಲ್ ಕುಮಾರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 13 ಸೆಕೆಂಡುಗಳ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಅಸಾಂಪ್ರದಾಯಿಕ ಕೊಕ್ಕಿನ ಆಕಾರದ ಮುಖವಾಡವನ್ನು ಧರಿಸಿರುವುದನ್ನು ಕಾಣಬಹುದು. ಮುಖದ ಮುಖವಾಡವು ಉದ್ದವಾದ ಕೊಕ್ಕಿನ ಆಕಾರದಲ್ಲಿ ಕಾಗದದಿಂದ ರೂಪುಗೊಂಡಂತೆ ಕಾಣುತ್ತದೆ ಮತ್ತು ಬೆಂಬಲಕ್ಕಾಗಿ ಎಳೆಗಳಿಂದ ಭದ್ರಪಡಿಸಲಾಗಿದೆ.
“ಹೊಸ ರೂಪಾಂತರ……ಹೊಸ ಮುಖವಾಡ……ಹೊಸ ವರ್ಷ,” ಎಂದು ಪೋಸ್ಟ್ ನ ಶೀರ್ಷಿಕೆ ಇದೆ. ಇದನ್ನು ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಬಿಎಫ್7 ನ ಹೊಸ ಮಾಸ್ಕ್ ಇದು ಎಂದು ಕಮೆಂಟ್ನಲ್ಲಿ ಹೇಳಲಾಗುತ್ತಿದೆ.