alex Certify ಸಾವಿನ ದವಡೆಗೆ ನೂಕುವ ʼಹೃದಯ ಸ್ತಂಭನʼ ದ ಕುರಿತು ನಿಮಗೆ ಅರಿವಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನ ದವಡೆಗೆ ನೂಕುವ ʼಹೃದಯ ಸ್ತಂಭನʼ ದ ಕುರಿತು ನಿಮಗೆ ಅರಿವಿರಲಿ

ಹೃದಯ ಸ್ತಂಭನ ಎಂದರೆ ದೇಹದಲ್ಲಿ ರಕ್ತಪರಿಚಲನೆ ಪರಿಣಾಮಾತ್ಮಕವಾಗಿ ಹೃದಯವನ್ನು ಸೇರಲು ವಿಫಲವಾದಾಗ ಹೃದಯ ಬಡಿತ ಶಾಶ್ವತವಾಗಿ ಅಥವಾ ಕೆಲವೊಮ್ಮೆ ತಾತ್ಕಾಲಿಕವಾಗಿ ನಿಂತುಹೋಗುತ್ತೆ. ಇದನ್ನೇ ಹಠಾತ್ ಹೃದಯ ಸ್ತಂಭನ ಎನ್ನಲಾಗುತ್ತೆ.

ಇದಕ್ಕೆ ಕಾರಣಗಳೇನು ಅನ್ನೋದನ್ನು ನೋಡೋದಾದ್ರೆ ಹೃದಯ ಬಡಿತ ಒಮ್ಮೆಲೇ ಏರುಪೇರಾಗುವುದು, ಹೃದಯಾಘಾತ, ದೈಹಿಕ ಒತ್ತಡ, ಅತೀವವಾಗಿ ರಕ್ತ ಹೋಗುವಿಕೆ, ಆಮ್ಲಜನಕದ ಕೊರತೆ ಮುಂತಾದವು. ಇನ್ನೂ ಕೆಲವೊಮ್ಮೆ ಕಾರಣಗಳೇ ಇರೋದಿಲ್ಲ.

ಹೃದಯ ಕಾಯಿಲೆ ಬರದಂತೆ ತಡೆಯುವುದು, ಅಥವಾ ಕುಟುಂಬದಲ್ಲಿ ಯಾರಿಗಾದರೂ ಹೃದಯ ಸಂಬಂಧಿ ಸಮಸ್ಯೆಗಳಿದ್ದಲ್ಲಿ ನಿಯಮಿತವಾಗಿ ಪರೀಕ್ಷೆ ಮಾಡಿಸುವುದು, ದೈಹಿಕ ಚಟುವಟಿಕೆಗಳು, ಆರೋಗ್ಯಪೂರ್ಣ ಡಯಟ್, ಧೂಮಪಾನ ಮಾಡದೇ ಇರುವುದರಿಂದ ಹೃದಯ ಸ್ತಂಭನವನ್ನು ಬಹುತೇಕ ತಡೆಯಬಹುದು.

ಹೃದಯ ಸ್ತಂಭನಕ್ಕೆ ತುತ್ತಾದವರಿಗೆ ತತ್ ಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ನೀಡಬೇಕು. ಇದರಿಂದ ವ್ಯಕ್ತಿಯ ಮೆದುಳಿಗೆ ಆಮ್ಲಜನಕ ಪೂರಿತ ರಕ್ತಸಂಚಾರಕ್ಕೆ ಸಹಾಯವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...