ಭಾನುವಾರ ರಜೆ ನಿಜ. ಹಾಗಂತ ತುಂಬಾ ಸಮಯ ಹಾಸಿಗೆ ಮೇಲಿರೋದು ಶುಭವಲ್ಲ. ಬೆಳಿಗ್ಗೆ ಬೇಗ ಎದ್ದು ನೀರಿಗೆ ಗಂಗಾಜಲ ಅಥವಾ ಎಳ್ಳೆಣ್ಣೆಯನ್ನು ಹಾಕಿ ಸ್ನಾನ ಮಾಡಬೇಕು.
ಇದ್ರಿಂದ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಇದಲ್ಲದೆ ಭಾನುವಾರ ಹಾಗೂ ಸಂಕ್ರಾಂತಿ ದಿನ ಅನೇಕ ಶುಭ ಕೆಲಸಗಳನ್ನು ಮಾಡಿದ್ರೆ ಅದೃಷ್ಟ ನಿಮ್ಮದಾಗುತ್ತದೆ.
ಸೂರ್ಯ ಯಂತ್ರವನ್ನು ಗಂಗಾಜಲ ಅಥವಾ ಹಾಲಿನಲ್ಲಿ ತೊಳೆದು ‘ಓಂ ಘೃಣಿ ಸೂರ್ಯಾಯ ನಮಃ’ ಮಂತ್ರವನ್ನು ಜಪಿಸಬೇಕು. ಮಂತ್ರ ಪಠಿಸಿದ ನಂತ್ರ ಸೂರ್ಯ ಯಂತ್ರವನ್ನು ದೇವರ ಮನೆಯಲ್ಲಿಡಬೇಕು. ಹೀಗೆ ಮಾಡಿದಲ್ಲಿ ಸೂರ್ಯ ಸಂಬಂಧಿ ಸಮಸ್ಯೆ ದೂರವಾಗುತ್ತದೆ.
ಜಾತಕದಲ್ಲಿ ಸೂರ್ಯ ಕೆಳ ಸ್ಥಾನದಲ್ಲಿದ್ದರೆ, ಸೂರ್ಯ ಯಂತ್ರದ ಪೂಜೆ ಮಾಡಿ. ಜಾತಕದ ದೋಷ ನಿವಾರಣೆಯಾಗುತ್ತದೆ.
‘ಓಂ ಘೃಣಿ ಸೂರ್ಯಯಾ ನಮಃ’ ಮಂತ್ರ ಪಠಿಸುವ ಜೊತೆಗೆ ತಾಮ್ರದ ಲೋಟದಲ್ಲಿ ಕುಂಕುಮ ಅಥವಾ ಕೆಂಪು ಹೂವನ್ನು ಹಾಕಿ ಅರ್ಘ್ಯ ನೀಡಬೇಕು. ಇದ್ರಿಂದ ಮನಸ್ಸಿನ ಎಲ್ಲ ಆಸೆ ಈಡೇರುವ ಜೊತೆಗೆ ಅದೃಷ್ಟದ ಬಾಗಿಲು ತೆರೆಯುತ್ತದೆ.
ಬಡವರಿಗೆ ಹಾಗೂ ಹಸಿದವರಿಗೆ ಅನ್ನವನ್ನು ದಾನ ಮಾಡಬೇಕು. ಇದ್ರಿಂದ ಎಲ್ಲ ಆಸೆ ಈಡೇರಲಿದೆ.
ಕೆಂಪು ಬಟ್ಟೆಯಲ್ಲಿ ಬೆಲ್ಲ ಹಾಗೂ ಗೋಧಿಯನ್ನು ಕಟ್ಟಿ ದಾನ ಮಾಡಿದ್ರೆ ಬಯಕೆ ಈಡೇರುತ್ತದೆ.