ಚೀನಾ ಸೇರಿದಂತೆ ಹೊರ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ಈಗಾಗ್ಲೇ ರಾಜ್ಯಗಳಿಗೆ ಕೊರೊನಾ ತಡೆಯಲು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ರಾಜ್ಯ ಸರ್ಕಾರವೂ ಈಗಾಗ್ಲೇ ಸಭೆ ಮಾಡಿ ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಿ ಮತ್ತೆ ಕೊರೊನಾ ಹೆಚ್ಚಾಗದಂತೆ ತಡೆಯಲು ಮುಂದಾಗಿದೆ.
ಕೊರೊನಾ ರೂಪಾಂತರಿ ಓಮಿಕ್ರಾನ್ BF.7 ಉಪತಳಿ ಬಗ್ಗೆ ಭಾರೀ ಭೀತಿ ಜನರನ್ನ ಕಾಡುತ್ತಿದೆ. ಆದ್ರೆ ಕೊರೊನಾ ರೂಪಾಂತರಿ ಓಮಿಕ್ರಾನ್ BF.7 ಉಪತಳಿ ಪ್ರಸರಣದಲ್ಲಿ ವೇಗವಾಗಿದೆ ಆದರೆ ಮಾರಣಾಂತಿಕವಾಗಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ಮಾಜಿ ವಿಜ್ಞಾನಿ ತಿಳಿಸಿದ್ದಾರೆ.
ICMR ನ ಮಾಜಿ ವಿಜ್ಞಾನಿ ಡಾ ಸಮೀರನ್ ಪಾಂಡಾ ಪ್ರಕಾರ, BF.7 ಉಪತಳಿಯ ವಂಶದ ಮಾರಕತೆಯ ಬಗ್ಗೆ ದಾರಿತಪ್ಪಿಸುವ ಮಾಹಿತಿಯನ್ನು ಹೊರಹಾಕಲು ಕೇಂದ್ರವು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಸ್ಪತ್ರೆಯ ಹಾಸಿಗೆಗಳು ಮತ್ತು ಔಷಧಿ, ಬೂಸ್ಟರ್ ಡೋಸ್ ವರೆಗೆ ಎಲ್ಲಾ ಪ್ರಮುಖ ಅಂಶಗಳ ಮೇಲೆ ಸರ್ಕಾರವು ಸರಿಯಾಗಿ ಗಮನಹರಿಸುತ್ತಿರುವಾಗ, ತಪ್ಪು ಮಾಹಿತಿ ಮೂಲಕ ಜನರನ್ನು ದಾರಿ ತಪ್ಪಿಸುವ ಮಾಹಿತಿಯನ್ನು ಹೊರಹಾಕುವುದರ ಮೇಲೆ ಒಂದು ಕಣ್ಣಿಡಬೇಕು ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವಾಟ್ಸ್ ಅಪ್ ಗಳಲ್ಲಿ BF.7 ರೂಪಾಂತರ ಮತ್ತು ಅದರ ಲಕ್ಷಣಗಳ ಬಗ್ಗೆ ಬಹಳಷ್ಟು ವೀಡಿಯೊಗಳು ಮತ್ತು ಸಂದೇಶಗಳೊಂದಿಗೆ ಜನರಲ್ಲಿ ಭಯದ ಭಾವನೆ ಇದೆ ಎಂದು ICMR ನಲ್ಲಿ ಸಾಂಕ್ರಾಮಿಕ ರೋಗ ವಿಭಾಗದಲ್ಲಿ ಕಾರ್ಯ ನಿರ್ವಹಿಸ್ತಿದ್ದ ಸಾಂಕ್ರಾಮಿಕ ರೋಗಶಾಸ್ತ್ರದ ಮಾಜಿ ಮುಖ್ಯಸ್ಥ ಪಾಂಡಾ ಹೇಳಿದರು..
ಸರ್ಕಾರ ಮತ್ತು ಇತರ ಜವಾಬ್ದಾರಿಯುತ ಸಂಸ್ಥೆಗಳು ಅನಗತ್ಯವಾಗಿ ಗಾಬರಿಗೊಳಿಸುವ ಸಂದೇಶಗಳ ಬಗ್ಗೆ ಸತ್ಯ-ಪರೀಕ್ಷೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಅವರು ಒತ್ತಿ ಹೇಳಿದರು.
ಹೊಸ ರೂಪಾಂತರವು ವೇಗವಾಗಿ ಹರಡುತ್ತಿದೆ ಆದರೆ ಮಾರಣಾಂತಿಕವಲ್ಲ ಎಂದು ಅವರು, ಸಂವಹನ ಮಾಡಬೇಕು. ಭಾರತದಲ್ಲಿ ಅದೇ ರೂಪಾಂತರವು ಕೇವಲ ಮೂರು-ನಾಲ್ಕು ಪ್ರಕರಣಗಳೊಂದಿಗೆ ಪತ್ತೆಯಾಗಿದೆ. ಈ ಪ್ರಕರಣದಲ್ಲಿನ ಕೊರೊನಾ ಸೋಂಕಿತರೆಲ್ಲರೂ ಚೆನ್ನಾಗಿ ಚೇತರಿಸಿಕೊಂಡಿದ್ದಾರೆ ಎಂದಿದ್ದಾರೆ.