ಬೈಕ್ ಸವಾರನೊಬ್ಬ ಟ್ರಕ್‌ನಡಿ ಸಿಲುಕಿ ಜೀವಂತವಾಗಿ ಹೊರಬಂದ ನಂಬಲಸಾಧ್ಯ ವಿಡಿಯೋವೊಂದು ಅಂತರ್ಜಾಲದಲ್ಲಿ ಜನರನ್ನು ಬೆರಗಾಗಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮಹಿಳೆಯೊಬ್ಬರು ಕಾರ್ ಬಾಗಿಲು ತೆರೆಯುತ್ತಿದ್ದಂತೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುತ್ತದೆ.
ತಕ್ಷಣ ಹತೋಟಿ ತಪ್ಪಿದ ವ್ಯಕ್ತಿ ಕೆಳಗೆ ಬಿದ್ದು ಅದೇ ದಾರಿಯಲ್ಲಿ ಹಾದುಹೋಗುತ್ತಿದ್ದ ಟ್ರಕ್ ಅಡಿಯಲ್ಲಿ ಸಿಲುಕುತ್ತಾನೆ. ತಕ್ಷಣ ಟ್ರಕ್ ನಿಲ್ಲುವುದನ್ನು ವಿಡಿಯೋ ತೋರಿಸುತ್ತದೆ. ಮುಂದೆ ಆಗಿದ್ದೆಲ್ಲವೂ ಪವಾಡದಂತೆ ತೋರುತ್ತದೆ.
ಆಕಸ್ಮಿಕವಾಗಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಮಹಿಳೆ ಅತ್ಯಂತ ಆಘಾತದಿಂದ ನೋಡುತ್ತಿದ್ದಂತೆ, ಬೈಕ್ ಸವಾರ ಕೆಲವೇ ಸೆಕೆಂಡುಗಳಲ್ಲಿ ಟ್ರಕ್ ಅಡಿಯಲ್ಲಿ ಜೀವಂತವಾಗಿ ತೆವಳುತ್ತಾ ಹೊರಬರುತ್ತಾನೆ.
ಇದನ್ನು ಭಾರತದಲ್ಲಿ ಅಥವಾ ವಿದೇಶದಲ್ಲಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಕೆಲವರು ಬೈಕ್ ಸವಾರನ ತಪ್ಪನ್ನು ಎತ್ತಿ ತೋರಿಸಿದರೆ, ಇನ್ನು ಕೆಲವರು ಪವಾಡ ಸದೃಶ ರೀತಿಯಲ್ಲಿ ಪಾರಾದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.