ಈ ಬಾರಿಯ ಐಪಿಎಲ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 23 ರಂದು ಈ ಹರಾಜು ನಡೆಯಲಿದ್ದು, ವಾಡಿಕೆಯಂತೆ ಬೆಂಗಳೂರಿನ ಬದಲು ಈ ಬಾರಿ ಕೇರಳದ ಕೊಚ್ಚಿಯಲ್ಲಿ ಹರಾಜು ನಡೆಯುತ್ತಿರುವುದು ವಿಶೇಷ.
ಇಂದು ಮಧ್ಯಾಹ್ನ 1:00 ಗಂಟೆಗೆ ಹರಾಜು ಆರಂಭವಾಗಲಿದ್ದು, ಒಟ್ಟು 405 ಆಟಗಾರರಿಗಾಗಿ ಐಪಿಎಲ್ ತಂಡಗಳ ಮಾಲೀಕರು ಬಿಡ್ ಮಾಡಲಿದ್ದಾರೆ. ಈ ಪೈಕಿ 30 ಮಂದಿ ಅಂತರಾಷ್ಟ್ರೀಯ ಆಟಗಾರರಾಗಿದ್ದಾರೆ.
ಗುಜರಾತ್ ಟೈಟನ್ಸ್
ಮುಂಬೈ ಇಂಡಿಯನ್ಸ್
ಪಂಜಾಬ್ ಕಿಂಗ್ಸ್
ಡೆಲ್ಲಿ ಕ್ಯಾಪಿಟಲ್ಸ್
ರಾಜಸ್ಥಾನ ರಾಯಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸನ್ ರೈಸರ್ಸ್ ಹೈದರಾಬಾದ್
ಚೆನ್ನೈ ಸೂಪರ್ ಕಿಂಗ್ಸ್
ಲಕ್ನೋ ಸೂಪರ್ ಜಾಯಿಂಟ್ಸ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಮಾಲೀಕರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
ಹರಾಜಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಬಳಿ 20.45 ಕೋಟಿ ರೂಪಾಯಿಗಳು ಉಳಿದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಬಳಿ 19.45 ಕೋಟಿ ರೂಪಾಯಿಗಳು ಇದೆ. ಇನ್ನು ಮುಂಬೈ ಇಂಡಿಯನ್ಸ್ ಬಳಿ 20.55 ಕೋಟಿ ರೂಪಾಯಿ, ಕೊಲ್ಕತ್ತಾ ನೈಟ್ ರೈಡರ್ಸ್ ಬಳಿ 7.05 ಕೋಟಿ ರೂಪಾಯಿ, ಲಕ್ನೋ ಸೂಪರ್ ಜಾಯಿಂಟ್ಸ್ ಬಳಿ 23.35 ಕೋಟಿ ರೂಪಾಯಿ, ಗುಜರಾತ್ ಟೈಟನ್ಸ್ ಬಳಿ 19.25 ಕೋಟಿ ರೂಪಾಯಿ, ರಾಜಸ್ಥಾನ್ ರಾಯಲ್ಸ್ ಬಳಿ 13.20 ಕೋಟಿ ರೂಪಾಯಿ, ಸನ್ ರೈಸರ್ಸ್ ಹೈದರಾಬಾದ್ ಬಳಿ 42.25 ಕೋಟಿ ರೂಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 8.75 ಕೋಟಿ ರೂಪಾಯಿ ಹಾಗೂ ಪಂಜಾಬ್ ಕಿಂಗ್ಸ್ ಬಳಿ 32.20 ಕೋಟಿ ರೂಪಾಯಿಗಳು ಇದೆ.