ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ರಥ ಯಾತ್ರೆ ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದೆ.
ಹೋದ ಕಡೆಯೆಲ್ಲೆಲ್ಲಾ ಕುಮಾರಸ್ವಾಮಿಯವರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದ್ದು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ವಿಧವಿಧವಾದ ಬೃಹತ್ ಹಾರಗಳನ್ನು ಹಾಕುವ ಮೂಲಕ ಅವರನ್ನು ಸ್ವಾಗತಿಸುತ್ತಿದ್ದಾರೆ.
ಈ ಹಾರಗಳ ವೈವಿಧ್ಯತೆ ನಿಜಕ್ಕೂ ಬೆರಗಾಗಿಸುವಂತಿದೆ. ಕನ್ನಡದ ಹಾರ, ಕೊಬ್ಬರಿ ಹಾರ, ಬೆಲ್ಲದ ಹಾರ, ಹೂ ಕೋಸಿನ ಹಾರ, ಬೇಬಿ ಕಾರ್ನ್ ಹಾರ, ಕಡಲೆಕಾಯಿ ಹಾರ, ವೀಳ್ಯೆದೆಲೆ ಹಾರ, ನಿಂಬೆ ಹಣ್ಣಿನ ಹಾರ, ಜೋಳದ ಹಾರ, ಅಡಿಕೆ ಹಾರ, ಸೇಬಿನ ಹಾರ, ಕ್ಯಾಪ್ಸಿಕಂ ಹಾರ, ಕರ್ಬೂಜ ಹಾರ ಹೀಗೆ ಹಲವು ರೀತಿಯ ಹಾರಗಳನ್ನು ಹಾಕಿ ಅಭಿಮಾನ ಮೆರೆಯಲಾಗಿದೆ.