ತಪ್ಪು ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಅವುಗಳನ್ನು ಯಾವೆಲ್ಲಾ ರೀತಿಯಲ್ಲಿ ಎತ್ತಿಕೊಂಡು ಹೋಗುವುದನ್ನು ನಾವು ನೋಡುತ್ತಿರುತ್ತೇವೆ. ಇಂಥ ಸಂದರ್ಭಗಳಲ್ಲಿ ವಾಹನಗಳಿಗೆ ಡ್ಯಾಮೇಜ್ ಕೂಡ ಆಗುವುದು ಉಂಟು. ಜತೆಗೆ ಒಂದು ವಾಹನ ಕೊಂಡೊಯ್ಯಲು ಮೂರ್ನಾಲ್ಕು ಮಂದಿ ಸಿಬ್ಬಂದಿ ಕೂಡ ಇರುತ್ತಾರೆ.
ಆದರೆ ಕೇವಲ 60 ಸೆಕೆಂಡುಗಳಲ್ಲಿ ಯಾವುದೇ ಸಿಬ್ಬಂದಿ ಟೋಯಿಂಗ್ ವಾಹನದಿಂದ ಕೆಳಕ್ಕೆ ಇಳಿಯದೇ ಕಾರು ಎಳೆದುಕೊಂಡು ಹೋಗುತ್ತದೆ ಎಂದರೆ ನಂಬುವಿರಾ?
ನಂಬಲೇಬೇಕು. ಏಕೆಂದರೆ ಅಂಥದ್ದೊಂದು ಅಚ್ಚರಿಯ ವಿಡಿಯೋ ವೈರಲ್ ಅಗಿದೆ. ಇದು ಯಾವ ಪ್ರದೇಶದ್ದು ಎಂದು ವಿಡಿಯೋದಲ್ಲಿ ಹೇಳಲಿಲ್ಲ. ಆದರೆ ಅನುಸರಿಸಿರುವ ಕ್ರಮ ಮಾತ್ರ ಮೆಚ್ಚುವಂಥದ್ದು.
“60 ಸೆಕೆಂಡುಗಳಲ್ಲಿ ಕಾರನ್ನು ಎಳೆಯುವುದು” ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರನ್ನು ಟೋಯಿಂಗ್ ವಾಹನ ಬಂದು ಕೂಲ್ ಆಗಿ ಎತ್ತಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
https://twitter.com/fasc1nate/status/1605788605561053186?ref_src=twsrc%5Etfw%7Ctwcamp%5Etweetembed%7Ctwterm%5E1605788605561053186%7Ctwgr%5Ec0bc2728113b69ab067a503434a89feca000f561%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-video-showing-a-truck-towing-away-car-in-60-seconds-leaves-internet-intrigued-3628817