ಉತ್ತಮ ಕೆಲಸ ಮಾಡಿದರೆ ಮಾತ್ರ ಉತ್ತಮ ಸಂಬಳ ಪಡೆಯುವುದು ಮಾಮೂಲಿ ನೌಕರರಿಗೆ ಮಾತ್ರ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಟೆಕ್ ದೈತ್ಯ ಗೂಗಲ್ ಕಂಪೆನಿಯ ಸಿಇಒ ಸುಂದರ್ ಪಿಚೈ ಅವರೂ ಇದೇ ಸಾಲಿಗೆ ಸೇರಿದ್ದಾರೆ.
ವರದಿಗಳ ಪ್ರಕಾರ, ಸುಂದರ್ ಪಿಚೈ ಅವರು ತಮ್ಮ ಕಾರ್ಯಕ್ಷಮತೆಗೆ ಅನುಗುಣವಾಗಿ ಹೆಚ್ಚಿನ ಶೇಕಡಾವಾರು ಸಂಬಳವನ್ನು ಹೊಂದುವವರ ಪಟ್ಟಿಗೆ ಸೇರಿದ್ದಾರೆ.
2019 ರಲ್ಲಿ ಇವರ ಸಂಬಳ ಶೇ. 43ರಷ್ಟು ಹೋಲಿಸಿದರೆ ಪಿಚೈ ಅವರ ವಾರ್ಷಿಕ ವೇತನ ಈಗ ಕಾರ್ಯಕ್ಷಮತೆಯ ಆಧಾರದ ಮೇಲೆ 60% ಹೆಚ್ಚಾಗಿದೆ. ಗೂಗಲ್ನ ಮೂಲ ಕಂಪೆನಿ ಇದಕ್ಕೆ ಒಪ್ಪಿಗೆಯನ್ನು ನೀಡಿದೆ.
ಸುಂದರ್ ಪಿಚೈ ಗೂಗಲ್‌ನಲ್ಲಿ 18 ವರ್ಷಗಳನ್ನು ಕಳೆದಿದ್ದಾರೆ. ಅವರು 2004 ರಲ್ಲಿ ಕಂಪೆನಿಗೆ ಸೇರಿದರು. ಐದು ವರ್ಷಗಳ ಹಿಂದೆ ಆಲ್ಫಾಬೆಟ್‌ನ ನಿರ್ದೇಶಕರ ಮಂಡಳಿಯಲ್ಲಿ ಅವರನ್ನು ಸೇರಿಸಲಾಗಿದೆ. ಅಂದಹಾಗೆ ಇವರು, ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ.