alex Certify ಅರ್ಜೆಂಟಿನಾ ಫಿಫಾ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ನೋಟುಗಳ ಮೇಲೆ ಮೆಸ್ಸಿ ಫೋಟೋ ಹಾಕಲು ಬಂದಿದೆ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಜೆಂಟಿನಾ ಫಿಫಾ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ನೋಟುಗಳ ಮೇಲೆ ಮೆಸ್ಸಿ ಫೋಟೋ ಹಾಕಲು ಬಂದಿದೆ ಬೇಡಿಕೆ

ಫಿಫಾ ವಿಶ್ವಕಪ್ ಗೆದ್ದ ಲಿಯೋನೆಲ್ ಮೆಸ್ಸಿ ಶೀಘ್ರದಲ್ಲೇ ಅರ್ಜೆಂಟೀನಾದ ಕರೆನ್ಸಿ ನೋಟಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಕತಾರ್‌ನಲ್ಲಿ ನಡೆದ FIFA ವಿಶ್ವಕಪ್ 2022 ರಲ್ಲಿ ತನ್ನ ದೇಶದ ರಾಷ್ಟ್ರೀಯ ತಂಡವನ್ನು ಗೆಲ್ಲಿಸಿದ ನಂತರ ಲಿಯೋನೆಲ್ ಮೆಸ್ಸಿ ಶೀಘ್ರದಲ್ಲೇ ಅರ್ಜೆಂಟೀನಾದಲ್ಲಿ ಕರೆನ್ಸಿ ನೋಟಿನಲ್ಲಿ ಕಾಣಿಸಿಕೊಳ್ಳಬಹುದು.

ಸ್ಥಳೀಯ ಹಣಕಾಸು ಪತ್ರಿಕೆ ಎಲ್ ಫೈನಾನ್ಸಿರೋ ಪ್ರಕಾರ, ಅರ್ಜೆಂಟೀನಾದ ಸೆಂಟ್ರಲ್ ಬ್ಯಾಂಕ್ ಮೆಸ್ಸಿಯ ಫೋಟೋವನ್ನ ಸಾವಿರ-ಪೆಸೊ ನೋಟಿನ ಮೇಲೆ ಮುದ್ರಿಸಲು ತಮಾಷೆಯಾಗಿ ಪ್ರಸ್ತಾಪಿಸಿದೆ.

ಬ್ಯಾಂಕ್ ನ ಸದಸ್ಯರು ತಮಾಷೆಯಾಗಿ ಪ್ರಸ್ತಾಪಿಸಿದರೂ ಅತ್ಯಂತ ಉತ್ಸಾಹಿ ನಿರ್ದೇಶಕರಾದ ಬೊಕಾ ಜೂನಿಯರ್ಸ್‌ನ ಉತ್ಕಟ ಬೆಂಬಲಿಗರಾದ ಲಿಸಾಂಡ್ರೊ ಕ್ಲೆರಿ ಮತ್ತು ಇಂಡಿಪೆಂಡೆಂಟೆಯ ಅನುಯಾಯಿ ಎಡ್ವರ್ಡೊ ಹೆಕರ್ ಅವರು ಒಪ್ಪಿಕೊಂಡಿದ್ದಾರೆ.

ಮೆಸ್ಸಿ ಫೋಟೋ ವಿನ್ಯಾಸದೊಂದಿಗಿನ ನೋಟು ಅರ್ಜೆಂಟೀನಾದವರ ಸಂಗ್ರಹಣಾ ಮನೋಭಾವವನ್ನು ಜಾಗೃತಗೊಳಿಸುತ್ತದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ನೋಟಿನ ಬ್ಯಾಂಕ್‌ನಲ್ಲಿ ‘ಲಾ ಸ್ಕಾಲೋನೆಟಾ’ ಇರುವಂತೆ ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ. ಲಾ ಸ್ಕಾಲೋನೆಟಾ ಅರ್ಜೆಂಟೀನಾ ಕೋಚ್ ಲಿಯೋ ಸ್ಕಾಲೋನಿಗೆ ಇಟ್ಟಿರುವ ಅಡ್ಡಹೆಸರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...