alex Certify ಮಂಗಳೂರು ವಿವಿ ಫಲಿತಾಂಶ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರು ವಿವಿ ಫಲಿತಾಂಶ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಳಗಾವಿ: ಮಂಗಳೂರು ವಿ.ವಿ.ಪದವಿ ತರಗತಿಗಳ ಪ್ರಥಮ ಸೆಮಿಸ್ಟರ್ ಫಲಿತಾಂಶ ಹತ್ತು ದಿನದೊಳಗಾಗಿ ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಶೂನ್ಯ ವೇಳೆಯಲ್ಲಿ ಶಾಸಕ ಯು.ಟಿ. ಖಾದರ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿ ಸಚಿವರು ಮಾತನಾಡಿದರು.

ಮಂಗಳೂರು ವಿ.ವಿ.ಯ ಮೊದಲ ಸೆಮಿಸ್ಟರ್ ಫಲಿತಾಂಶ ಇದುವರೆಗೂ ಪ್ರಕಟವಾಗಿರುವುದಿಲ್ಲ. ವಿದ್ಯಾರ್ಥಿ ವೇತನ ಪಾವತಿಗೆ ಹಿಂದಿನ ವರ್ಷದ ಅಂಕಪಟ್ಟಿ ಕೇಳಲಾಗುತ್ತದೆ. ಹೀಗಾಗಿ ವಿದ್ಯಾರ್ಥಿ ವೇತನಕ್ಕೆ ಅಜಿ ಸಲ್ಲಿಸಲೂ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಮಂಗಳೂರು ವಿವಿಯು ನ್ಯಾಕ್ ‘ಎ’ ಗ್ರೇಡ್‍ನಲ್ಲಿತ್ತು. ಈಗ ‘ಬಿ’ ಗ್ರೇಡ್‍ಗೆ ಬಂದಿದೆ. ವಿಶ್ವ ವಿದ್ಯಾಲಯದ ಗುಣಮಟ್ಟ ಪುನಃ ಉತ್ತಮ ಪಡಿಸಲು ಕ್ರಮ ವಹಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...