ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆಹಚ್ಚುವ ಆಪ್ಟಿಕಲ್ ಪಿಕ್ಚರ್ಸ್ ಟ್ರೆಂಡ್ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವರು ಇವುಗಳನ್ನು ಇಷ್ಟಪಡುತ್ತಾರೆ.
ಅಂಥದ್ದೇ ಒಂದು ಚಿತ್ರ ಇಲ್ಲಿದೆ. ಮೂವರು ಮಹಿಳೆಯರನ್ನು ಒಳಗೊಂಡಿರುವ ಒಂದು ವರ್ಣಚಿತ್ರ ಇಲ್ಲಿದೆ. ಇದರಲ್ಲಿ ಎಲ್ಲೋ ಅಡಗಿರುವ ಮೂವರು ಪುರುಷರನ್ನು ಹುಡುಕುವಿರಾ? ಸವಾಲಿನ ವಿಷಯವೆಂದರೆ ನೀವು ಅದನ್ನು 10 ಸೆಕೆಂಡುಗಳಲ್ಲಿ ಮಾತ್ರ ಗುರುತಿಸಬೇಕು.
ಚಿತ್ರದತ್ತ ಎಷ್ಟೇ ಕಣ್ಣು ಹಾಯಿಸಿದರೂ ಕೊಟ್ಟ ಕಾಲಮಿತಿಯೊಳಗೆ ಮೂವರು ಪುರುಷರು ಕಾಣಿಸುವುದೇ ಇಲ್ಲ ಅಲ್ಲವೆ?
ಆದ್ದರಿಂದ, ಅದನ್ನು ಸುಲಭವಾಗಿ ಹುಡುಕಲು ನಿಮಗೆ ಸಹಾಯ ಮಾಡುತ್ತಿದ್ದೇವೆ. ಮಹಿಳೆಯರ ಹಿಂದೆ ಮರಗಳಲ್ಲಿ ಪುರುಷರ ಮುಖಗಳನ್ನು ಗುರುತಿಸಬಹುದು. ಚಿತ್ರದ ಎಡಭಾಗದಲ್ಲಿ ಮತ್ತು ಮಹಿಳೆಯ ಬಲಭಾಗದಲ್ಲಿ ಒಬ್ಬ ಪುರುಷನ ಮುಖವನ್ನು ಹೊಂದಿದೆ. ಇನ್ನೆರಡು ವಿಂಡ್ಮಿಲ್ ಬಳಿ ಮಹಿಳೆಯರ ಎಡಕ್ಕೆ, ಮತ್ತು ವೀಕ್ಷಕರ ಬಲಕ್ಕೆ ಇವೆ. ಈಗ ಕಂಡಿತಾ?
ಅಂದಹಾಗೆ ಈ ಚಿತ್ರವನ್ನು 1800 ರಲ್ಲಿ ಲೀಬಿಗ್ ಎಂಬ ಕಲಾವಿದ ರಚಿಸಿದ್ದಾರೆ.