ಕ್ರಿಸ್ಮಸ್ ಹತ್ತಿರ ಬರ್ತಿದೆ. ಬೀದಿ ಬೀದಿಗಳಲ್ಲಿ ದೀಪಾಲಂಕಾರ, ಕ್ರಿಸ್ಮಸ್ ಆಚರಣೆಗೆ ತಯಾರಿ ನಡೆಯುತ್ತಿದೆ. ಸಾಮಾನ್ಯವಾಗಿ ಕ್ರಿಸ್ಮಸ್ ಎಂದಾಕ್ಷಣ ಬಹುತೇಕರು ಪಾರ್ಟಿಗೆ ತೆರಳುತ್ತಾರೆ. ಆತ್ಮೀಯರೊಂದಿಗೆ ಹಬ್ಬವನ್ನು ಸೆಲೆಬ್ರೇಟ್ ಮಾಡ್ತಾರೆ. ಪ್ರತಿ ವರ್ಷ ಕ್ರಿಸ್‌ಮಸ್ ಹಬ್ಬವನ್ನು ಪ್ರಪಂಚದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಡಿಸೆಂಬರ್ 25 ರಂದು ಯೇಸು ಕ್ರಿಸ್ತನ ಜನ್ಮದಿನವನ್ನು ಆಚರಿಸಲಾಗುತ್ತದೆ. ಕ್ರಿಸ್ಮಸ್ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂದು ಕರೆಯಲಾಗುತ್ತದೆ.
ಹೊಸ ಬಟ್ಟೆಗಳನ್ನು ಧರಿಸಿ ಹತ್ತಿರದ ಬಂಧುಗಳು ಮತ್ತು ಆತ್ಮೀಯರಿಗೆ ಉಡುಗೊರೆಗಳನ್ನು ಕೊಡುವುದು ವಿಶೇಷ. ಇದರ ಜೊತೆಗೆ ಪಾರ್ಟಿಯಲ್ಲಿ ದಿನ ಕಳೆಯುತ್ತಾರೆ. ಕ್ರಿಸ್ಮಸ್ ಪಾರ್ಟಿಗೆ ಹೋಗಲು ಇಷ್ಟವಿಲ್ಲದೇ ಇದ್ದರೆ ಹಬ್ಬವನ್ನು ಮನೆಯಲ್ಲೇ ವಿಭಿನ್ನವಾಗಿ ಆಚರಿಸಬಹುದು.
ಮೂವಿ ಮ್ಯಾರಥಾನ್: ಕ್ರಿಸ್ಮಸ್ ದಿನ ಮೂವಿ ಮ್ಯಾರಥಾನ್ ಕೂಡ ಸಖತ್ ಸ್ಪೆಷಲ್ ಆಗಿರುತ್ತದೆ. ಆರಾಮಾಗಿ ಮನೆಯವರು, ಆತ್ಮೀಯರು, ಸಂಬಂಧಿಕರೊಂದಿಗೆ ಕುಳಿತು ನೀವು ಇಷ್ಟಪಡುವ ಎಲ್ಲಾ ಸಿನೆಮಾಗಳನ್ನು ವೀಕ್ಷಿಸಿ.
ಮನೆಯವರೊಂದಿಗೆ ಪ್ಲೇ: ಕ್ರಿಸ್‌ಮಸ್ ದಿನವನ್ನು ವಿಶಿಷ್ಟವಾಗಿ ಕಳೆಯಲು ಮನೆಯವರೊಂದಿಗೆ ವಿಭಿನ್ನ ಆಟಗಳನ್ನು ಆಡಬಹುದು. ಒಗಟುಗಳನ್ನು ಬಿಡಿಸುವುದು ಅಥವಾ ಬೋರ್ಡ್ ಆಟಗಳನ್ನು ಆಡಬಹುರು. ಕೇರಂ, ಕಾರ್ಡ್ಸ್ ಹೀಗೆ ಅನೇಕ ಆಟಗಳು ನಮ್ಮ ಮೂಡ್ ಅನ್ನು ರಿಫ್ರೆಶ್ ಮಾಡುತ್ತವೆ.
ಕುಕೀಸ್ ಮೇಕಿಂಗ್: ಕ್ರಿಸ್ಮಸ್ ದಿನ ಸ್ಪೆಷಲ್ಲಾಗಿ ಕುಕ್ಕೀಸ್ ಹಾಗೂ ಕೇಕ್‌ಗಳನ್ನು ತಯಾರಿಸಿ. ಫ್ರೆಶ್ ಆಗಿ ಮಾಡಿದ ಕುಕೀಸ್ ಹಾಗೂ ಕೇಕ್ ಸಖತ್ ಟೇಸ್ಟಿಯಾಗಿರುತ್ತದೆ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಸೀಕ್ರೆಟ್ ಸಾಂತಾ ಗಿಫ್ಟ್: ನಿಮ್ಮ ಕುಟುಂಬದೊಂದಿಗೆ ಸೀಕ್ರೆಟ್ ಸಾಂತಾ ಗಿಫ್ಟ್ ಹಂಚಿಕೊಳ್ಳಬಹುದು. ಅವರಿಗೆ ಹೇಳದೆಯೇ ಇಷ್ಟಪಡುವಂಥ ವಸ್ತುಗಳನ್ನು ಪರಸ್ಪರ ಉಡುಗೊರೆಯಾಗಿ ನೀಡಿ.
ಫ್ಯಾಮಿಲಿ ಸ್ಲೀಪ್ ಓವರ್: ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಸೇರಿದಾಗ ತುಂಬಾನೇ ಖುಷಿಯಾಗಿ ಕಾಲ ಕಳೆಯಬಹುದು. ಸ್ಲೀಪ್‌ಓವರ್ ಅನ್ನು ಹೋಸ್ಟ್ ಮಾಡಿ, ಕ್ರಿಸ್ಮಸ್ ಡ್ರೆಸ್‌ಗಳನ್ನು ಧರಿಸಿ ನಿಮಗಿಷ್ಟವಾದ ಕೆಲಸಗಳನ್ನು ಮಾಡಿ. ಈ ರೀತಿ ಡಿಫರೆಂಟ್ ಆಗಿ ಕ್ರಿಸ್ಮಸ್ ಅನ್ನು ಆಚರಿಸಬಹುದು.