alex Certify ಹೃದಯಾಘಾತದ ಅಪಾಯದ ಬಗ್ಗೆ ನಿಮಗೆಷ್ಟು ಗೊತ್ತು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತದ ಅಪಾಯದ ಬಗ್ಗೆ ನಿಮಗೆಷ್ಟು ಗೊತ್ತು…?

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯ ಹೃದಯಾಘಾತದ ಸಂದರ್ಭದಲ್ಲಿ ಉಸಿರಾಟ ತೊಂದರೆ ಮೊದಲಾದ ಲಕ್ಷಣ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಸೇರಿಸಿದರೆ ಅಪಾಯದಿಂದ ಉಳಿಸಬಹುದು.

ಏಕಾಏಕಿ ಬಂದೆರಗುವ ಹೃದಯಾಘಾತವನ್ನು ತಡೆಯಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಈ ರೀತಿಯ ಹೃದಯಾಘಾತ ಸಂಭವಿಸುವಾಗ, ಯಾವುದೇ ಮುನ್ಸೂಚನೆ ಇರುವುದಿಲ್ಲ. ಒಮ್ಮೆಲೆ ಪ್ರಾಣಪಕ್ಷಿ ಹಾರಿಹೋಗಿ ಬಿಡುತ್ತದೆ. ಹೃದಯದ ಸ್ನಾಯುಗಳಲ್ಲಿ ರಕ್ತ ಕಡಿಮೆಯಾಗುವುದರೊಂದಿಗೆ ತಕ್ಷಣ ಪ್ರಾಣ ಹೋಗುತ್ತದೆ ಎಂದು ತಿಳಿಸಿದೆ.

ಒಮ್ಮೆಲೆ ಎರಗುವ ಹೃದಯಾಘಾತದಲ್ಲಿ ಹೃದಯ ಸ್ತಂಭನವಾದ ನಂತರ ಚಿಕಿತ್ಸೆ ನೀಡಿದರೆ, ಪ್ರಯೋಜನವಾಗುವುದಿಲ್ಲ. ಹೃದಯದ ಸಮಸ್ಯೆ ಇರುವ 9498 ಮಧ್ಯ ವಯಸ್ಕರನ್ನು ಅಧ್ಯಯನದ ಸಂದರ್ಭದಲ್ಲಿ ನೋಂದಾಯಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ.

ಅಧ್ಯಯನದ ಸಂದರ್ಭದಲ್ಲಿ 317 ಮಂದಿಗೆ ಲಕ್ಷಣಗಳಿಲ್ಲದೇ, ಹೃದಯಾಘಾತ ಸಂಭವಿಸಿದೆ. 386 ಮಂದಿಗೆ ಸಾಮಾನ್ಯವಾದ ರೀತಿಯಲ್ಲಿ ಹೃದಯಾಘಾತ ಉಂಟಾಗಿದೆ. ಒಮ್ಮೆಲೆ ಹೃದಯಾಘಾತ ಸಂಭವಿಸಿ ಪ್ರಾಣ ಬಿಡುವವರ ಸಂಖ್ಯೆಯಲ್ಲಿ ಶೇ.34 ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...