ಬೆಳಗಾವಿ: ಸ್ವಾತಂತ್ರ್ಯಕ್ಕಾಗಿ ಬಿಜೆಪಿ ನಾಯಕರ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ,ರವಿ, ಇಟಲಿಯ ಒಂದು ನಾಯಿಯೂ ಈವರೆಗೆ ಭಾರತದ ಪರ ಬಾಲ ಅಲ್ಲಾಡಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಆ ನಾಯಿ ಚೀನಾ, ಪಾಕ್ ಪರ ಎಂಜಲು ತಿಂದಿದೆ. ಇಟಲಿ ಕಾಂಗ್ರೆಸ್ ನ ಒಂದು ನಾಯಿಯೂ ಭಾರತದ ಪರ ಬೊಗಳಿಲ್ಲ ಎಂದು ವಿವಾದ ಸೃಷ್ಟಿಸಿದ್ದಾರೆ.
ಭಾರತೀಯ ಜನಸಂಘ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದೆ. ಸರ್ವಾಧಿಕಾರಿ ಇಂದಿರಾ ಗಾಂಧಿಯನ್ನು ಕೆಳಗೆ ಇಳಿಸಿದರು. ಖರ್ಗೆಯವರು ಅಂದಿನ ದಿನಮಾನ ನೆನಪಿಸಿಕೊಳ್ಳಲಿ. ಸ್ವಾತಂತ್ರ್ಯ ಸಿಕ್ಕಿರೋದು ದೇಶ ಲೂಟಿ ಹೊಡೆಯಲೇ? ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಈಗಿರುವುದು ಇಟಲಿ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.