alex Certify ಕ್ಯಾನ್ಸರ್‌ಗೂ ಕಾರಣವಾಗುತ್ತೆ ಮೌತ್‌ವಾಶ್‌ನ ಅತಿಯಾದ ಬಳಕೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ಗೂ ಕಾರಣವಾಗುತ್ತೆ ಮೌತ್‌ವಾಶ್‌ನ ಅತಿಯಾದ ಬಳಕೆ…..!

ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ದಿನಕ್ಕೆ ಎರಡು ಬಾರಿ ಬ್ರಶ್‌ ಮಾಡಬೇಕು ಅನ್ನೋದು ನಮಗೆಲ್ಲಾ ತಿಳಿದಿದೆ. ಕೆಲವರು ಬ್ರಷ್‌ ಮಾಡುವುದರ ಜೊತೆಜೊತೆಗೆ ಆಗಾಗ ಮೌತ್‌ ವಾಶ್‌ ಕೂಡ ಬಳಸುತ್ತಾರೆ. ಇದು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಆದರೆ ನೀವು ದಿನನಿತ್ಯ ಅತಿಯಾಗಿ ಮೌತ್ ವಾಶ್ ಬಳಸಿದರೆ ಅದು  ಹಾನಿಕಾರಕ. ಮೌತ್ ವಾಶ್ ಕೂಡ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಅದನ್ನು ಅತಿಯಾಗಿ ಬಳಸುವುದನ್ನು ತಪ್ಪಿಸಬೇಕು. ಮೌತ್ ​​ವಾಶ್ ಬಳಸುವುದರಿಂದ ಆಗುವ ಅನನುಕೂಲಗಳೇನು ಎಂಬುದನ್ನು ನೋಡೋಣ.

ಶುಷ್ಕತೆಯ ಸಮಸ್ಯೆ: ನೀವು ನಿರಂತರವಾಗಿ ಬಾಯಿಯಲ್ಲಿ ಶುಷ್ಕತೆಯನ್ನು ಅನುಭವಿಸುತ್ತಿದ್ದರೆ ಮೌತ್‌ವಾಶ್‌ ಕೂಡ ಇದಕ್ಕೆ ಕಾರಣವಾಗಿರಬಹುದು. ಮೌತ್ ​​ವಾಶ್‌ನಲ್ಲಿ ಆಲ್ಕೋಹಾಲ್ ಇರುವುದು ಇದಕ್ಕೆ ಕಾರಣ. ಹಾಗಾಗಿ ಪದೇ ಪದೇ ಮೌತ್‌ ವಾಶ್‌ ಬಳಸುವುದರಿಂದ ಬಾಯಿ ಒಣಗುತ್ತದೆ.

ಸುಡುವಿಕೆ ಅಥವಾ ನೋವು: ಮೌತ್‌ವಾಶ್ ಬಳಸುವುದರಿಂದ ಹೆಚ್ಚಿನ ಜನರು ಸುಡುವ ಸಂವೇದನೆ ಮತ್ತು ನೋವನ್ನು ಅನುಭವಿಸುತ್ತಾರೆ. ಕೆಲವು ಮೌತ್‌ವಾಶ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಇರುತ್ತದೆ, ಈ ಕಾರಣದಿಂದಾಗಿ ನೀವು ಅದನ್ನು ಅತಿಯಾಗಿ ಬಳಸಿದರೆ ಬಾಯಿ ಸುಟ್ಟು ಹೋಗಬಹುದು. ನೋವು ಕೂಡ ಉಂಟಾಗುತ್ತದೆ.

ಕ್ಯಾನ್ಸರ್ ಅಪಾಯ: ಮೌತ್‌ವಾಶ್‌ ಕೆಲವೊಮ್ಮೆ ಕ್ಯಾನ್ಸರ್‌ ಕಾಯಿಲೆಗೂ ಕಾರಣವಾಗಬಹುದು. ಮೌತ್‌ವಾಶ್‌ನಲ್ಲಿ ಸಿಂಥೆಟಿಕ್ ಅಂಶಗಳಿವೆ, ಇದರಿಂದಾಗಿ ಕ್ಯಾನ್ಸರ್ ಸಮಸ್ಯೆ ಉಂಟಾಗಬಹುದು. ಹಲ್ಲುಗಳಲ್ಲಿ ಕಲೆ : ಎಷ್ಟೋ ಜನರಿಗೆ ಈ ವಿಚಾರ ತಿಳಿದಿಲ್ಲ. ಅತಿಯಾಗಿ ಮೌತ್‌ವಾಶ್‌ ಬಳಸಿದರೆ ಅದರಿಂದ ಹಲ್ಲುಗಳಲ್ಲಿ ಕಲೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೌತ್‌ ವಾಶ್‌ ಅನ್ನು ಮಿತವಾಗಿ ಬಳಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...