alex Certify ಪೆಟ್ರೋಲ್​ ಬಂಕ್​ನಲ್ಲಿ ಧೂಮಪಾನ ಮಾಡುತ್ತಿದ್ದವನಿಗೆ ಸರಿಯಾದ ಬುದ್ಧಿ ಕಲಿಸಿದ ನೌಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್​ ಬಂಕ್​ನಲ್ಲಿ ಧೂಮಪಾನ ಮಾಡುತ್ತಿದ್ದವನಿಗೆ ಸರಿಯಾದ ಬುದ್ಧಿ ಕಲಿಸಿದ ನೌಕರ

ಸಾರ್ವಜನಿಕ ಸ್ಥಳದಲ್ಲಿದ್ದಾಗ ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಪೆಟ್ರೋಲ್ ಬಂಕ್‌ಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಎಂಬುದು ಪ್ರಪಂಚದಾದ್ಯಂತ ತಿಳಿದಿರುವ ಸಂಗತಿಯಾಗಿದೆ. ಕಾರಣ ತುಂಬಾ ಸರಳವಾಗಿದೆ – ಪೆಟ್ರೋಲ್ ಹೆಚ್ಚು ದಹನಕಾರಿಯಾಗಿದೆ. ಯಾವುದೇ ದಹಿಸುವ ವಸ್ತುವಿನ ಸಂಪರ್ಕಕ್ಕೆ ಬಂದಾಗ ಅದು ಬೆಂಕಿಯನ್ನು ಹಿಡಿಯಬಹುದು.

ಆದಾಗ್ಯೂ, ಕೆಲವು ಜನರು ತಮ್ಮ ಸುರಕ್ಷತೆ ಅಥವಾ ಅವರ ಸುತ್ತ ಇರುವ ಯಾವುದೇ ಇತರ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದೇ ರೀತಿಯ ಒಂದು ಘಟನೆಯಲ್ಲಿ, ಒಬ್ಬ ವ್ಯಕ್ತಿ ಪೆಟ್ರೋಲ್ ಬಂಕ್​ನಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಆತನಿಗೆ ಧೂಮಪಾನ ಮಾಡದಂತೆ ಹೇಳಿದರೂ ಅವನು ಕೇರ್ ಮಾಡದ ಹಿನ್ನೆಲೆಯಲ್ಲಿ ಮುಂದೇನಾಯಿತು ನೋಡಿ.

ಡ್ಯಾಮ್ ದಟ್ಸ್ ಇಂಟರೆಸ್ಟಿಂಗ್ ಮೂಲಕ ರೆಡ್ಡಿಟ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಪೆಟ್ರೋಲ್​ ಬಂಕ್​ನಲ್ಲಿ ತನ್ನ ಕಾರಿನ ಬಾಗಿಲು ತೆರೆದಿರುವಂತೆ ಕಾಣುತ್ತಾನೆ. ಇನ್ನೊಂದು ಬದಿಯಲ್ಲಿ, ಮತ್ತೊಂದು ಕಾರು ನಿಲ್ಲಿಸಲಾಗಿದೆ ಮತ್ತು ಒಬ್ಬ ವ್ಯಕ್ತಿ ತನ್ನ ಕಾರಿಗೆ ಪೆಟ್ರೋಲ್​ ತುಂಬಿಸಿಕೊಳ್ಳಲು ಬರುತ್ತಾನೆ.

ಏತನ್ಮಧ್ಯೆ, ಧೂಮಪಾನಿಯೊಬ್ಬ ಸುತ್ತಮುತ್ತಲಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪೆಟ್ರೋಲ್​ ಬಂಕ್​ ನೌಕರ ಇದನ್ನು ಗಮನಿಸುತ್ತಾನೆ. ಸಿಟ್ಟುಗೊಂಡ ಆತ ಬೆಂಕಿ ನಂದಿಸುವ ಅಗ್ನಿಶಾಮಕ ಉಪಕರಣ ಎತ್ತಿಕೊಂಡು ಧೂಮಪಾನಿ ಬಳಿ ಬಂದು ಅಲ್ಲಿ ಅದರಿಂದ ಜ್ವಾಲೆ ನಂದಿಸುವಂತೆ ನೀರು ಹಾಕುತ್ತಾನೆ. ಇದರಿಂದ ಧೂಮಪಾನಿ ಕಂಗಾಲಾಗುತ್ತಾನೆ. ಇಷ್ಟು ವಿಡಿಯೋದಲ್ಲಿ ನೋಡಬಹುದು. ಧೂಮಪಾನಿಗೆ ಪಾಠ ಕಲಿಸಲು ಇದೇ ಸರಿಯಾದ ಮಾರ್ಗ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...