ಮುಂಬೈ: ಗಡಿ ವಿವಾದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಕ್ಯಾತೆ ತೆಗೆದಿದೆ. ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂ ನಿಂದ ನೀರು ಕೊಡದಂತೆ ಎನ್ ಸಿ ಪಿ ಶಾಸಕ ಜಯಂತ್ ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರ ಅಧಿವೇಶನದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಚರ್ಚೆಯಾಗಿದ್ದು, ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಯಾವ ಭಾಷೆಯಲ್ಲಿ ಮಾತನಾಡುತ್ತಾರೋ ಅದೇ ಭಾಷೆಯಲ್ಲೇ ಅವರಿಗೆ ಉತ್ತರಿಸಬೇಕು. ಕರ್ನಾಟಕಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಕೊಯ್ನಾ, ಕೊಲ್ಹಾಪುರ ಜಿಲ್ಲೆಯ ಡ್ಯಾಂ ಗಳ ಎತ್ತರ ಹೆಚ್ಚಿಸಬೇಕು. ಕರ್ನಾಟಕಕ್ಕೆ ನೀರು ಬಿಡದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಜಯಂತ್ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಗಡಿ ವಿವಾದದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ನಾಯಕರು ಜಲವಿವಾದ ಸೃಷ್ಟಿಸಲು ಮುಂದಾಗಿದ್ದಾರೆ.