
ಹಾಡು, ಸಂಗೀತ ಎಂದರೆ ಇಷ್ಟಪಡದವರು ಬಹಳ ಕಮ್ಮಿ ಜನ ಎನ್ನಬಹುದು. ಇವುಗಳಿಗೆ ಎಂಥವರನ್ನೂ ಮೋಡಿ ಮಾಡುವ ಶಕ್ತಿ ಇದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನೃತ್ಯ, ಹಾಡುಗಳದ್ದೇ ಸಿಂಹಪಾಲು.
ಇದೀಗ ಅಂಥದ್ದೇ ಒಂದು ವಿಡಿಯೋ ಭಾರಿ ವೈರಲ್ ಆಗಿದೆ. ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸಮವಸ್ತ್ರದಲ್ಲಿ ನೃತ್ಯ ಮಾಡುವ ವಿಡಿಯೋ ಇದಾಗಿದೆ. ನೈಋತ್ಯ ದೆಹಲಿಯ ನಾರಾಯಣ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ ಕಮಾಂಡಿಂಗ್ ಅಧಿಕಾರಿ ಈ ನೃತ್ಯ ಮಾಡಿದ್ದಾರೆ.
ಮೇರಾ ಬಲ್ಮಾ ತಾನೇದಾರ್ ಅವರ ಬೀಟ್‌ಗಳಿಗೆ ಇವರು ಹೆಜ್ಜೆ ಹಾಕಿದ್ದಾರೆ. ವರದಿಯ ಪ್ರಕಾರ, ಪೊಲೀಸ್ ಅಧಿಕಾರಿ ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ವೇಳೆ ಅವರು ರಜೆಯಲ್ಲಿದ್ದರು. ಹಾಡಿಗೆ ನೃತ್ಯ ಮಾಡಲು ಪೊಲೀಸ್ ಅಧಿಕಾರಿ ನಿರ್ದಿಷ್ಟವಾಗಿ ಸಮವಸ್ತ್ರವನ್ನು ಹಾಕಿದ್ದರು ಎಂದು ತೀರ್ಮಾನಿಸಲಾಗಿದೆ. ವಿಡಿಯೋದಲ್ಲಿ ಇತರ ಪೊಲೀಸ್ ಅಧಿಕಾರಿಗಳನ್ನು ಸಹ ಕಾಣಬಹುದು. ಅವರು ಬಹುಶಃ ಅವರ ತಂಡದ ಭಾಗವಾಗಿದ್ದಾರೆ.
ಆದರೆ ಇದೇ ವೇಳೆ ಪೊಲೀಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಮವಸ್ತ್ರದಲ್ಲಿ ಅವರು ನೃತ್ಯ ಮಾಡಿರುವುದು ಸರಿಯಲ್ಲ ಎಂದು ಹಲವರು ಹೇಳುತ್ತಿದ್ದಾರೆ.