alex Certify ತೂಕ ಇಳಿಸಲು ಕಪ್ಪು ಕಡಲೆ ಸೇವಿಸಿ; ಖ್ಯಾತ ಫುಟ್ಬಾಲ್‌ ಆಟಗಾರ ಮೆಸ್ಸಿಯಂತೆ ಫಿಟ್‌ ಆಗಿರುತ್ತೆ ದೇಹ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಕಪ್ಪು ಕಡಲೆ ಸೇವಿಸಿ; ಖ್ಯಾತ ಫುಟ್ಬಾಲ್‌ ಆಟಗಾರ ಮೆಸ್ಸಿಯಂತೆ ಫಿಟ್‌ ಆಗಿರುತ್ತೆ ದೇಹ….!

ಫಿಟ್‌ನೆಸ್ ವಿಷಯದಲ್ಲಿ ಫುಟ್ಬಾಲ್‌ ಆಟಗಾರರು ಎಲ್ಲರಿಗೂ ಮಾದರಿಯಾಗ್ತಾರೆ. ಯಾಕಂದ್ರೆ ಸಂಪೂರ್ಣ ಫಿಟ್‌ ಆಗಿರದೇ ಇದ್ದರೆ 90 ನಿಮಿಷಗಳ ಕಾಲ ಸತತವಾಗಿ ಓಡುತ್ತ ಆಟವಾಡುವುದು ಅಸಾಧ್ಯ. ಹಾಗಾಗಿಯೇ ಫುಟ್ಬಾಲ್‌ ಆಟಗಾರರು ಫಿಟ್ನೆಸ್‌ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಅರ್ಜೆಂಟೀನಾ ತಂಡಕ್ಕೆ ಪಿಫಾ ವಿಶ್ವಕಪ್‌ ಗೆದ್ದು ಕೊಟ್ಟ ಲಿಯೋನೆಲ್‌ ಮೆಸ್ಸಿ ಕೂಡ ಸಖತ್‌ ಫಿಟ್&ಫೈನ್‌ ಆಗಿದ್ದಾರೆ. ಆರೋಗ್ಯಕರ ಆಹಾರ ಸೇವನೆಯ ಜೊತೆಗೆ ನಿಯಮಿತವಾದ ವ್ಯಾಯಾಮದ ಮೂಲಕ ಮೆಸ್ಸಿ ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಮೆಸ್ಸಿ ರೀತಿಯಲ್ಲೇ ಫಿಟ್‌ ಆಗಿರಲು ಬಯಸುವವರು ತಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ನಿಯಮಿತವಾಗಿ ಸೇವಿಸಿ ಕಪ್ಪು ಕಡಲೆ..!

ಪೌಷ್ಟಿಕ ತಜ್ಞರ ಪ್ರಕಾರ ತೂಕ ಇಳಿಸಿಕೊಳ್ಳಲು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ನೀವು ಕಪ್ಪು ಕಡಲೆಯನ್ನು ಸೇವನೆ ಮಾಡಬಹುದು. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರೋಟೀನ್, ಫೈಬರ್, ಫೋಲೇಟ್, ತಾಮ್ರ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಕಬ್ಬಿಣ ಸೇರಿದಂತೆ ಅನೇಕ ರೀತಿಯ ಪೋಷಕಾಂಶಗಳು ಕಡಲೆ ಕಾಳುಗಳಲ್ಲಿವೆ. ಇದು ದೇಹವನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ.ಕಡಲೆಯಲ್ಲಿ ಹೇರಳವಾದ ಪ್ರೊಟೀನ್ ಮತ್ತು ಫೈಬರ್ ಇರುವುದರಿಂದ ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿ ದೇಹವನ್ನು ಬಲಪಡಿಸುತ್ತದೆ.

ನಮ್ಮ ದೇಹಕ್ಕೆ ಬೇಕಾದ ದೈನಂದಿನ ಪ್ರೋಟೀನ್ ಅಗತ್ಯವನ್ನು ಪೂರೈಸುತ್ತದೆ. ನಿಯಮಿತವಾಗಿ ಕಡಲೆ ಕಾಳುಗಳನ್ನು ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಪ್ರಮಾಣವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಸ್ಥೂಲಕಾಯತೆಯನ್ನು ಕಡಿಮೆ ಮಾಡುವುದಲ್ಲದೆ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಲೆ ತಿನ್ನುವುದರಿಂದ ಹಾನಿಕಾರಕ ಟ್ರೈಗ್ಲಿಸರೈಡ್ ದೇಹದಿಂದ ಮಲದ ರೂಪದಲ್ಲಿ ಹೊರಬರುತ್ತದೆ.

ಕಡಲೆ ಕಾಳುಗಳನ್ನು ಹೇಗೆ ಸೇವಿಸಬೇಕು?

ಕಪ್ಪು ಕಡಲೆ ಕಾಳುಗಳನ್ನು ರಾತ್ರಿಯಿಡೀ ಒಂದು ಪಾತ್ರೆಯಲ್ಲಿ ನೀರು ಹಾಕಿ ನೆನೆಯಲು ಬಿಡಿ. ಅದು ಚೆನ್ನಾಗಿ ನೆನೆದ ಬಳಿಕ ನೀರು ಚೆಲ್ಲಿ, ಕಾಳುಗಳನ್ನು ಬಳಗೆ ಅಥವಾ ದಿನದ ಯಾವುದೇ ಸಮಯದಲ್ಲಿ ತಿನ್ನಬಹುದು. ನೆನೆಸಿ ಕಾಳುಗಳನ್ನು ಮೊಳಕೆ ಬರಿಸಿಕೊಂಡು ತಿಂದರೆ ಇನ್ನೂ ಉತ್ತಮ. ಮೊಳಕೆ ಬರಿಸಿದ ಕಡಲೆಗೆ ಹೆಚ್ಚಿದ ಈರುಳ್ಳಿ, ಬ್ಲಾಕ್‌ ಸಾಲ್ಟ್‌, ನಿಂಬೆ ರಸ ಹಾಕಿಕೊಂಡು ಸಲಾಡ್‌ ರೀತಿಯಲ್ಲೂ ತಿನ್ನಬಹುದು. ಇದು ಟೇಸ್ಟಿ ಮತ್ತು ಆರೋಗ್ಯಕರವಾಗಿರುತ್ತದೆ. ಇದಲ್ಲದೆ ಹುರಿದ ಕಾಳುಗಳನ್ನು ಸೇವಿಸಬಹುದು. ಆದರೆ ಎಣ್ಣೆಯುಕ್ತ ತಿನಿಸುಗಳಿಂದ ದೂರವಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...