alex Certify ಹೋಗುವ ಕಾಲ ಬಂದಿದೆ… ಎಲ್ಲರಿಗೂ ಧನ್ಯವಾದ: ಕ್ಯಾನ್ಸರ್​ ರೋಗಿಯ ಟ್ವೀಟ್​ಗೆ ಕಣ್ಣೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಗುವ ಕಾಲ ಬಂದಿದೆ… ಎಲ್ಲರಿಗೂ ಧನ್ಯವಾದ: ಕ್ಯಾನ್ಸರ್​ ರೋಗಿಯ ಟ್ವೀಟ್​ಗೆ ಕಣ್ಣೀರು

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅಮನ್ ಎಂಬ ವ್ಯಕ್ತಿ ವಿಶ್ವಕ್ಕೆ ತನ್ನ ಅಂತಿಮ ವಿದಾಯವನ್ನು ಹೇಳುತ್ತಿರುವ ಪೋಸ್ಟ್​ ಒಂದು ವೈರಲ್​ ಆಗಿದ್ದು, ಜನರನ್ನು ಭಾವುಕರನ್ನಾಗಿಸುತ್ತದೆ.

ಮಾರ್ಕ್ ಸ್ಟೋಕ್ಸ್ ಎಂಬ ವ್ಯಕ್ತಿ ಈ ಸಂದೇಶವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. “ಹಾಯ್ ಜನರೇ, ನಾನು ವಿದಾಯ ಹೇಳುವ ಸಮಯ ಬಂದಿದೆ. ಇದರಿಂದ ನಾನು ಹೆದರುತ್ತಿದ್ದೇನೆ. ನಾನು ಕಳೆದ 2 ವರ್ಷಗಳಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದೇನೆ, ಆದರೆ ಈಗ ಕೆಲವೇ ದಿನಗಳು ಉಳಿದಿವೆ. ಅದ್ಭುತ ಜನರಿಗೆ ಧನ್ಯವಾದಗಳು, ನನ್ನ ಹೃದಯದಲ್ಲಿ ತುಂಬಾ ಪ್ರೀತಿಯೊಂದಿಗೆ ನಾನು ಈ ಹುಚ್ಚು ಜಗತ್ತನ್ನು ಬಿಡುತ್ತೇನೆ“ ಎಂದು ಮಾರ್ಕ್ ಸ್ಟೋಕ್ಸ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಹೃದಯ ವಿದ್ರಾವಕ ಟ್ವೀಟ್​ ಓದಿದ ನೆಟ್ಟಿಗರು ಕಣ್ಣೀರಾಗಿದ್ದಾರೆ. ನಿರಾಶರಾಗಬೇಡಿ, ಜೀವಿಸುವ ಸಾಧ್ಯತೆಗಳೂ ಇವೆ ಎಂದು ಹಲವರು ಮಾರ್ಕ್​ಗೆ ಧೈರ್ಯ ತುಂಬಿದ್ದರೆ, ಮತ್ತೆ ಕೆಲವರು ಕಣ್ಣೀರಿನ ಇಮೋಜಿಯೊಂದಿಗೆ ಮೌನಕ್ಕೆ ಜಾರಿದ್ದಾರೆ. ತನ್ನ ಮಕ್ಕಳ ಜತೆ ನಗುತ್ತಿರುವ ಫೋಟೋ ಅನ್ನು ಅವರು ಶೇರ್​ ಮಾಡಿರುವುದು ಇನ್ನಷ್ಟು ದುಃಖಕ್ಕೆ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...