ಮಹಾರಾಷ್ಟ್ರದ ಶಾಸಕಿಯೊಬ್ಬರು ತಮ್ಮ 10 ವಾರದ ಮಗುವಿನಿಂದ ಸದನಕ್ಕೆ ಬರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್.ಸಿ.ಪಿ) ಶಾಸಕಿ ಸೋಮವಾರದಂದು ಮಗು ಜೊತೆ ಸದನಕ್ಕೆ ಆಗಮಿಸಿದ್ದರು.
ಸೋಮವಾರದಂದು ಮಹಾರಾಷ್ಟ್ರದ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು, ಶಾಸಕಿ ಸರೋಜ್ ಅಹಿರೆ ಮಗುವಿನೊಂದಿಗೆ ಸದನಕ್ಕೆ ಬಂದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ತಾಯಿ ಮಾತ್ರವಲ್ಲ. ಜನಪ್ರತಿನಿಧಿಯೂ ಸಹ ಹೌದು. ಹೀಗಾಗಿ ಸದನದಲ್ಲಿ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಪ್ರಸ್ತಾಪಿಸಲು ಆಗಮಿಸಿದ್ದೇನೆ ಎಂದರು.