ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್ ಟ್ರೆಂಡ್ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವರು ಇವುಗಳನ್ನು ಇಷ್ಟಪಡುತ್ತಾರೆ.
ಅಂಥದ್ದೇ ಒಂದು ಚಿತ್ರ ಇಲ್ಲಿದೆ. ನೇರಳೆ ಗ್ರಾಫಿಕ್ ತರಹದ ವಾಲ್ಪೇಪರ್ ಚಿತ್ರವನ್ನು ನೀವು ಇಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮೂರು ಅಂಕಿಯ ಗುಪ್ತ ಸಂಖ್ಯೆಯಿದೆ. ಅದನ್ನು ನೀವು ಕಂಡುಹಿಡಿಯಬೇಕು. ಸವಾಲಿನ ವಿಷಯವೆಂದರೆ ನೀವು ಅದನ್ನು 15 ಸೆಕೆಂಡುಗಳಲ್ಲಿ ಮಾತ್ರ ಗುರುತಿಸಬೇಕು.
ಚಿತ್ರದತ್ತ ಎಷ್ಟೇ ಕಣ್ಣು ಹಾಯಿಸಿದರೂ ಕೊಟ್ಟ ಕಾಲಮಿತಿಯೊಳಗೆ ಬಹುತೇಕರಿಗೆ ಮೂರು ಅಂಕಿಯ ಗುಪ್ತ ಸಂಖ್ಯೆ ಕಾಣಿಸುವುದೇ ಇಲ್ಲ ಅಲ್ಲವೆ?
ಆದ್ದರಿಂದ, ಅದನ್ನು ಸುಲಭವಾಗಿ ಹುಡುಕಲು ನಿಮಗೆ ಸಹಾಯ ಮಾಡುತ್ತಿದ್ದೇವೆ. ನಿಖರವಾದ ಸಂಖ್ಯೆಗಳನ್ನು ನೋಡಲು ನೀವು ಚಿತ್ರವನ್ನು ಸ್ವಲ್ಪ ಮೇಲಕ್ಕೆ ಮತ್ತು ಕೆಳಕ್ಕೆ ಸರಿಸಬೇಕಾಗುತ್ತದೆ. ಚಿತ್ರಾತ್ಮಕ ಮಾದರಿಯನ್ನು 708 ಅನ್ನು ರೂಪಿಸುವ ರೀತಿಯಲ್ಲಿ ಇರಿಸಲಾಗಿದೆ. ಅದನ್ನು ಇಲ್ಲಿ ತೋರಿಸಲಾಗಿದೆ ನೋಡಿ.