ನೀತಿಶಾಸ್ತ್ರದ ಶ್ರೇಷ್ಠ ವಿದ್ವಾಂಸರಾದ ಆಚಾರ್ಯ ಚಾಣಕ್ಯ ಅವರು ಉತ್ತಮ ಸ್ನೇಹಿತರ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಸಾವಿನವರೆಗೂ ಇರುವ ಸ್ನೇಹಿತರು ಯಾರು ಎಂಬುದನ್ನು ಚಾಣಕ್ಯ ಹೇಳಿದ್ದಾರೆ.
ಮನೆ ಬಿಟ್ಟು, ಕುಟುಂಬಸ್ಥರಿಂದ ದೂರವಿರುವ ವ್ಯಕ್ತಿಗೆ ಜ್ಞಾನಕ್ಕಿಂತ ದೊಡ್ಡ ಸ್ನೇಹಿತರಿಲ್ಲ. ಮನುಷ್ಯ ತನ್ನ ಪ್ರೀತಿಪಾತ್ರರಿಂದ ದೂರವಿರುವಾಗ ಜ್ಞಾನ ಮಾತ್ರ ಕೊನೆಯವರೆಗೆ ಸಹಾಯ ಮಾಡುತ್ತದೆ.
ಚಾಣಕ್ಯನ ಪ್ರಕಾರ, ಪತ್ನಿ ಪತಿಯ ಅತ್ಯುತ್ತಮ ಸ್ನೇಹಿತೆಯಾಗಿರುತ್ತಾಳೆ. ಒಳ್ಳೆಯ ಪತ್ನಿಯಿಂದ ಪತಿಗೆ ಸದಾ ಸಾಮಾಜದಲ್ಲಿ ಸ್ಥಾನ-ಮಾನ ಸಿಗುತ್ತದೆ. ಒಳ್ಳೆಯ ಗುಣ ಹೊಂದಿರದ ಪತ್ನಿಯಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಆರೋಗ್ಯ ಕಳಪೆಯಾಗಿರುವ ವ್ಯಕ್ತಿಗೆ ಔಷಧಿ ನಿಜವಾದ ಸ್ನೇಹಿತ. ಔಷಧಿ ಅನಾರೋಗ್ಯ ವ್ಯಕ್ತಿಯನ್ನು ಗುಣಪಡಿಸುತ್ತದೆ ಎಂದು ಚಾಣಕ್ಯ ಹೇಳಿದ್ದಾನೆ.
ಕೊನೆಯಲ್ಲಿ ಧರ್ಮವನ್ನು ಮನುಷ್ಯನ ನಾಲ್ಕನೇ ಉತ್ತಮ ಸ್ನೇಹಿತ ಎಂದು ಚಾಣಕ್ಯ ವಿವರಿಸಿದ್ದಾನೆ. ಧರ್ಮದ ಹಾದಿಯಲ್ಲಿ ನಡೆಯುವ ಯಾವುದೇ ವ್ಯಕ್ತಿ ಜೀವಂತವಾಗಿರುವಾಗ ಮಾಡಿದ ಕೆಲಸವನ್ನು ಮಾತ್ರ ನೆನಪಿಸಿಕೊಳ್ಳಲಾಗುತ್ತದೆ. ಅವನು ಗಳಿಸಿದ ಸದ್ಗುಣವನ್ನು ಅವನ ಮರಣದ ನಂತರ ನೆನಪಿಸಿಕೊಳ್ಳಲಾಗುತ್ತದೆ.