ಬೊಕ್ಕ ತಲೆ ಅನ್ನೋದು ಬಹುದೊಡ್ಡ ಸಮಸ್ಯೆ, ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಎಲ್ಲವೂ ಸರಿಯಾಗಿದ್ದು ತಲೆಯಲ್ಲಿ ಕೂದಲೇ ಇಲ್ಲ ಅಂದ್ರೆ ಅದಕ್ಕಿಂತ ಮುಜುಗರದ ವಿಷಯ ಇನ್ನೊಂದಿಲ್ಲ ಅಂತಾ ಬೇಸರಪಟ್ಟುಕೊಳ್ಳುವವರೇ ಹೆಚ್ಚು.
ಎಷ್ಟು ಚೆನ್ನಾಗಿ ಡ್ರೆಸ್ ಮಾಡಿಕೊಂಡು ರೆಡಿಯಾದ್ರೂ ಬಕ್ಕತಲೆಯಿಂದಾಗಿ ತುಂಬಾನೇ ವಯಸ್ಸಾಗಿರುವಂತೆ ಕಾಣ್ತಾರೆ. ಕೂದಲು ಉದುರುವಿಕೆಯಿಂದ ಕಂಗಾಲಾಗಿರುವವರು ಕಸಿ ಮಾಡಿಸಿಕೊಳ್ತಾರೆ, ಇಲ್ಲವೇ ರಾಸಾಯನಿಕ ಮಿಶ್ರಿತ ಔಷಧಗಳನ್ನು ಬಳಸ್ತಾರೆ.
ಅದರ ಬದಲು ಮನೆಯಲ್ಲೇ ನೀವು ನೈಸರ್ಗಿಕವಾಗಿ ಬೊಕ್ಕತಲೆಯ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬಹುದು. ಅಂತಹ 7 ವಿಧಾನಗಳು ಇಲ್ಲಿವೆ.
ಆಲೂಗಡ್ಡೆ : ಆಲೂಗಡ್ಡೆ ಜ್ಯೂಸ್ ತೆಗೆದು ಅದನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತೊಳೆದರೆ ಕೂದಲು ಉದುರುವುದಿಲ್ಲ.
ಮೊಟ್ಟೆ ಮತ್ತು ಈರುಳ್ಳಿ : ಒಂದು ಚಮಚ ಈರುಳ್ಳಿ ಜ್ಯೂಸ್ ಗೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲು ಬೆಳೆಯುತ್ತದೆ.
ಬೆಳ್ಳುಳ್ಳಿ : ಬೆಳ್ಳುಳ್ಳಿ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ನೆತ್ತಿಯ ಮೇಲೆ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.
ಟೊಮ್ಯಾಟೋ : ಒಂದೊಂದು ಚಮಚ ಟೊಮ್ಯಾಟೋ ಜ್ಯೂಸ್, ಜೇನು ತುಪ್ಪ ಮತ್ತು ಆಲೂಗಡ್ಡೆ ಜ್ಯೂಸ್ ಅನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಕರಿಬೇವು : ಕಾಲು ಕಪ್ ನಷ್ಟು ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆಗೆ ಕರಿಬೇವಿನ ಎಲೆಯ ಪುಡಿ ಸೇರಿಸಿ ಬಿಸಿ ಮಾಡಿ. ನಂತರ ರಾತ್ರಿ ಮಲಗುವಾಗ ಅದನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಈ ರೀತಿ ವಾರದಲ್ಲಿ 3 ಬಾರಿ ಮಾಡಿ.
ಆಲಿವ್ ಎಣ್ಣೆ : 3-4 ಚಮಚ ಆಲಿವ್ ಎಣ್ಣೆಯನ್ನು ಬೆಚ್ಚಗೆ ಮಾಡಿ ನಿಮ್ಮ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಟವಲ್ ಅನ್ನು ಬಿಸಿ ನೀರಲ್ಲಿ ಅದ್ದಿ ಹಿಂಡಿ ತಲೆಗೆ ಸುತ್ತಿಕೊಳ್ಳಿ. ಒಂದು ಗಂಟೆಯ ಬಳಿಕ ಸ್ನಾನ ಮಾಡಿ.
ಅಲೋವೆರಾ : ಪ್ರತಿನಿತ್ಯ ಅಲೋವೆರಾ ಜೆಲ್ ಅನ್ನು ನಿಮ್ಮ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.