ಥಾಯ್ ನೌಕಾಪಡೆಯ 100ಕ್ಕೂ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಹಡಗು ಥಾಯ್ಲೆಂಡ್ ಕೊಲ್ಲಿಯಲ್ಲಿ ಮುಳುಗಿದ್ದು ನಾಪತ್ತೆಯಾಗಿರುವ 33 ಮಂದಿಗೆ ಹುಡುಕಾಟ ನಡೆಸಲಾಗ್ತಿದೆ. ಥಾಯ್ಲೆಂಡ್ನ ಸೇನೆಯು ಸೋಮವಾರ ಯುದ್ಧನೌಕೆಗಳು ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಿ 33 ನಾವಿಕರನ್ನು ಪತ್ತೆಹಚ್ಚಲು ಪ್ರಯತ್ನಿಸಿದೆ. 106 ನಾವಿಕರನ್ನು ಹೊತ್ತೊಯ್ಯುತ್ತಿದ್ದಾಗ ಹಡಗು ಥೈಲ್ಯಾಂಡ್ ಕೊಲ್ಲಿಯಲ್ಲಿ ತಡರಾತ್ರಿ ಮುಳುಗಡೆಯಾಗಿತು.
HTMS ಸುಖೋಥಾಯ್ ಯುದ್ಧನೌಕೆ ಇಂಜಿನ್ ದೋಷಪೂರಿತವಾಗಿ ಕರಾವಳಿಯಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ಮಧ್ಯರಾತ್ರಿ ಮುಳುಗಡೆಯಾಗಿದೆ. ನಂತರ ಬ್ಯಾಂಕಾಕ್ನ ದಕ್ಷಿಣಕ್ಕೆ ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದಿಂದ ಕಾಣೆಯಾದವರನ್ನು ಹುಡುಕಲು ಮೂರು ನೌಕಾಪಡೆಯ ಹಡಗುಗಳು ಮತ್ತು ಎರಡು ಹೆಲಿಕಾಪ್ಟರ್ಗಳನ್ನು ಕಳುಹಿಸಲಾಯಿತು ಎಂದು ಥಾಯ್ ನೌಕಾಪಡೆ ತಿಳಿಸಿದೆ.
ಕೆಟ್ಟ ಹವಾಮಾನ ಪರಿಸ್ಥಿತಿಯಲ್ಲಿ ರಾತ್ರಿಯ ರಕ್ಷಣಾ ಕಾರ್ಯಾಚರಣೆಯ ವೇಳೆ ಹಡಗಿನಲ್ಲಿದ್ದ 106 ಜನರಲ್ಲಿ 73 ಜನರನ್ನು ರಕ್ಷಿಸಲಾಗಿದ್ದು , ನಾಪತ್ತೆಯಾಗಿರುವ 33 ಜನರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದೆ.
ನೌಕಾಪಡೆಯು ತನ್ನ ಟ್ವಿಟ್ಟರ್ ಖಾತೆಯಲ್ಲಿ ದುರಂತದ ಚಿತ್ರಗಳು ಮತ್ತು ವೀಡಿಯೊ ತುಣುಕನ್ನು ಪೋಸ್ಟ್ ಮಾಡಿದೆ.