ದೇಹದ ಯಾವ ಭಾಗದಲ್ಲಾದರು ಗಾಯವಾಗಿದ್ದರೆ ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ಸೋಸಿ ನಂತರ ಅದರಿಂದ ಗಾಯವನ್ನು ತೊಳೆದರೆ ಗಾಯ ಬೇಗ ಮಾಗುತ್ತದೆ.
ಬಿಳಿಸ್ರಾವ ಸಮಸ್ಯೆ ಇದ್ದರೆ ತುಂಬೆ ಎಲೆಗಳನ್ನು ಬೇಯಿಸಿ ಅನ್ನದ ಜತೆ ಸೇವಿಸಿದರೆ ಬಿಳಿಸ್ರಾವ ಕಡಿಮೆಯಾಗುತ್ತದೆ.
ಚರ್ಮದಲ್ಲಿ ತುರಿಕೆ, ಅಲರ್ಜಿ ಆಗಿದ್ದರೆ ಚರ್ಮದ ಮೇಲೆ ತುಂಬೆ ಎಲೆಯ ಪೇಸ್ಟ್ ಲೇಪಿಸಿ. ವಿಪರೀತ ಬಾಯಾರಿಕೆ ಆಗುತ್ತಿದ್ದರೆ ತುಂಬೆ ಹೂಗಳನ್ನು ಒಂದು ಲೋಟ ನೀರಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಿ. ಈ ಕಷಾಯವನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ.
ಮಕ್ಕಳ ಹೊಟ್ಟೆಯಲ್ಲಿ ಹುಳುವಾಗಿದ್ದರೆ ತುಂಬೆ ಹೂವು ಮತ್ತು ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಸಿದರೆ ಹೊಟ್ಟೆ ಹುಳು ನಿವಾರಣೆಯಾಗುತ್ತದೆ.
ತುಂಬೆ ಗಿಡವನ್ನು ಬೇರು ಸಹಿತ ನೀರಲ್ಲಿ ಹಾಕಿ ಕಷಾಯ ಮಾಡಿ ಅದಕ್ಕೆ ಸೈಂಧವ ಉಪ್ಪು ಹಾಕಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.
ತುಂಬೆ ಗಿಡವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಗೆ ಬೇವಿನ ಪುಡಿ ಸೇರಿಸಿ ನೀರಲ್ಲಿ ಹಾಕಿ ಕಷಾಯ ತಯಾರಿಸಿ ನಿಯಮಿತವಾಗಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.