ಕೆಲವರ ಮನೆಯಲ್ಲಿ ಅಶಾಂತಿ, ಅನಾರೋಗ್ಯ, ಬಡತನ ಕಾಡುತ್ತಿರುತ್ತೆ. ಇದಕ್ಕೆ ಮನೆಯ ವಾಸ್ತು ದೋಷ ಕೂಡ ಕಾರಣ. ವಾಸ್ತುಗೆ ಸಂಬಂಧಿಸಿದ ವಿಷ್ಯಗಳನ್ನು ತಿಳಿಯದೇ ದೋಷ ಪರಿಹಾರ ಮಾಡಿಕೊಳ್ಳದೆ ಹೋದಲ್ಲಿ ಸಮಸ್ಯೆ ಉಲ್ಬಣಿಸುತ್ತದೆ.
ಮನೆಯ ಮುಖ್ಯ ದ್ವಾರದ ಬಣ್ಣ ಕಪ್ಪಗಿರಬಾರದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಬಣ್ಣ ಕಪ್ಪಗಿದ್ದರೆ ಸದಾ ಗಲಾಟೆ, ಜಗಳ, ಅಶಾಂತಿ ನೆಲೆಸಿರುತ್ತದೆ.
ಮನೆಯ ಮುಖ್ಯ ದ್ವಾರಕ್ಕಿಂತ ಮನೆಯ ಉಳಿದ ಬಾಗಿಲು ಚಿಕ್ಕದಿರಬೇಕು. ಉಳಿದ ಬಾಗಿಲು ದೊಡ್ಡದಿದ್ದಲ್ಲಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.
ಬೆಳಿಗ್ಗೆ ಸೂರ್ಯೋದಯದ ವೇಳೆ ಮನೆಯ ಕಿಟಕಿಗಳನ್ನು ತೆರೆದಿರಬೇಕು. ಇದ್ರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸೂರ್ಯೋದಯದ ವೇಳೆ ಕಿಟಕಿ ಬಾಗಿಲುಗಳು ಮುಚ್ಚಿದ್ದರೆ ಹಿರಿಯರು ಹಾಗೂ ಚಿಕ್ಕ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಡಲು ಶುರುವಾಗುತ್ತದೆ.
ಮುಖ್ಯ ದ್ವಾರದ ಬಳಿ ಚಾಕು ಅಥವಾ ಕತ್ತಿ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಇಡಬೇಡಿ. ಇದ್ರಿಂದ ಗಲಾಟೆ ಜಗಳ ಹೆಚ್ಚಾಗುತ್ತದೆ.
ಬೆಡ್ ರೂಂನಲ್ಲಿ ಶೌಚಾಲಯವಿರಬಾರದು. ಇದ್ರಿಂದ ದಾಂಪತ್ಯ ಜೀವನದಲ್ಲಿ ಮುನಿಸು ಕಾಣಿಸಿಕೊಳ್ಳುತ್ತದೆ.