alex Certify ಮದ್ವೆಯಾಗಲು ಇಚ್ಛಿಸದಾಕೆ ಜನರ ಬಾಯಿ ಮುಚ್ಚಿಸಲು ಮಾಡಿದ್ದೇನು ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ವೆಯಾಗಲು ಇಚ್ಛಿಸದಾಕೆ ಜನರ ಬಾಯಿ ಮುಚ್ಚಿಸಲು ಮಾಡಿದ್ದೇನು ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ

ಜೈಪುರ: ರಾಜಸ್ತಾನದಲ್ಲಿ ನಡೆದ ಮದುವೆಯೊಂದು ವಿಚಿತ್ರ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಸಿಂಗ್ ಎಂಬ 30 ವರ್ಷದ ಮಹಿಳೆಯ ಮದುವೆ ಇದಾಗಿದೆ. ಗಣೇಶ ಪೂಜೆಯಂತಹ ಎಲ್ಲಾ ಸಾಮಾನ್ಯ ಆಚರಣೆಗಳು ಈ ಮದುವೆಯಲ್ಲಿ ಇದ್ದರೂ ವರ ಮಾತ್ರ ಇರಲಿಲ್ಲ!
ಇಂಥದ್ದೊಂದು ಕುತೂಹಲದ ಮದುವೆ ಡಿಸೆಂಬರ್ 8 ರಂದು ಜೈಪುರದ ಗೋವಿಂದಗಢ್ ಬಳಿಯ ಹಳ್ಳಿಯಲ್ಲಿ ನಡೆದಿದ್ದು, ಇದರ ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗಿವೆ. ಅಷ್ಟಕ್ಕೂ ವರನೇ ಇಲ್ಲದೇ ಈ ಯುವತಿ ಮದುವೆಯಾಗಿದ್ದು ಯಾರಿಗೆ ಅಂತೀರಾ? ಖುದ್ದು ವಿಷ್ಣು ಪರಮಾತ್ಮನನ್ನು!

ಈ ಮದುವೆಗೆ ಕಾರಣವೇನು ಎಂದು ಈಕೆಗೆ ಕೇಳಿದಾಗ, ತನಗೆ ಮದುವೆಯಾಗುವ ಮನಸ್ಸು ಇರಲಿಲ್ಲ. ಮದುವೆಯಾಗಿ ಕಷ್ಟಪಡುವುದು ನನಗೆ ಬೇಡ. ಆದರೆ ಮದುವೆ ಏಕೆ ಆಗುತ್ತಿಲ್ಲ ಎಂದು ಜನರು ಪದೇ ಪದೇ ಚುಚ್ಚುಮಾತುಗಳನ್ನು ಆಡುತ್ತಿದ್ದರು. ಅವರ ಬಾಯಿ ಮುಚ್ಚಿಸಲು ದೇವಸ್ಥಾನದಲ್ಲಿ ಕುಳಿತು ಠಾಕೂರ್ಜಿಯನ್ನು (ವಿಷ್ಣು) ಮದುವೆಯಾಗಿದ್ದೇನೆ ಎಂದು ಪೂಜಾ ಹೇಳಿದ್ದಾರೆ.

ಮನೆಯಲ್ಲಿ ತಂದೆ-ತಾಯಿ ನಿರಂತರವಾಗಿ ಜಗಳವಾಡುವುದನ್ನು ಕಂಡ ಪೂಜಾ ಮದುವೆಯಾಗದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಪೂಜಾ ವಿಷ್ಣುವಿನ ಭಕ್ತೆ ಮತ್ತು ಆತನನ್ನು ತನ್ನ ಪತಿಯಾಗಿ ಸ್ವೀಕರಿಸಿದ್ದಾಳೆ. ಅವಳು ಇನ್ನು ಮುಂದೆ ಸಮಾಜದ ದೂಷಣೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಮಾಜದ ಅನೇಕ ಜನರು ಪೂಜಾ ಅವರನ್ನು ಬೆಂಬಲಿಸಿ ಅವರ ಸಂತೋಷದಲ್ಲಿ ಸೇರಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...