alex Certify ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬೇವಿನ ಎಲೆಗಳ ಸೇವನೆ ಸೂಕ್ತವೇ….? ತಿನ್ನುವ ಮೊದಲು ಸತ್ಯ ತಿಳಿದುಕೊಳ್ಳಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬೇವಿನ ಎಲೆಗಳ ಸೇವನೆ ಸೂಕ್ತವೇ….? ತಿನ್ನುವ ಮೊದಲು ಸತ್ಯ ತಿಳಿದುಕೊಳ್ಳಿ……!

ಭಾರತದಲ್ಲಿ ಕೋಟ್ಯಂತರ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ರೋಗವನ್ನು ಹತೋಟಿಗೆ ತರಲು ಪ್ರತಿನಿತ್ಯ ಮಾತ್ರೆ, ಔಷಧಗಳನ್ನು ಸೇವಿಸಬೇಕು. ಪ್ರತಿದಿನ ಕಹಿ ಬೇವಿನ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು ಎಂದು ಹಲವರು ಸಲಹೆ ನೀಡುತ್ತಾರೆ. ಕಹಿ ಬೇವಿನ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂಬುದು ನಿಜ. ಆದರೆ ಇಂತಹ ಮನೆಮದ್ದುಗಳನ್ನು ಮಾಡುವ ಮೊದಲು ಅದರ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳಬೇಕು. ಬೇವಿನ ಎಲೆಗಳನ್ನು ತಿನ್ನುವುದು ಮಧುಮೇಹಿಗಳಿಗೆ ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯೋಣ.

ಬೇವಿನ ಎಲೆಯಲ್ಲಿ ಕೀಟ ನಿವಾರಕ ಗುಣವಿದೆ. ಆದರೆ ಕಹಿಬೇವಿನ ಎಲೆಗಳನ್ನ ಸೇವನೆ ಮಾಡುವುದರಿಂದ ಡಯಾಬಿಟಿಸ್‌ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿಲ್ಲ. ಹಾಗಾಗಿ ಕಹಿಬೇವಿನ ಎಲೆಗಳನ್ನು ಸೇವನೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕಾಗಿ ನೀವು ಹಾಗಲಕಾಯಿ, ಮೆಂತ್ಯ ಮತ್ತು ಲಿನ್ಸೆಡ್ ಬೀಜಗಳನ್ನು ಬಳಸಬಹುದು. ಇದು ನಿಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿದಿನ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸಬೇಕು. ಇದರ ಹೊರತಾಗಿ ಆಹಾರ ಮತ್ತು ಪಾನೀಯಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು.

ಪ್ರತಿದಿನ ವ್ಯಾಯಾಮ ಮಾಡಬೇಕು. ಸಮಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಔಷಧಿಗಳನ್ನು ಮರೆತರೆ ದಿಢೀರ್‌ ಅನಾರೋಗ್ಯಕ್ಕೆ ತುತ್ತಾಗಬಹುದು. ವೈದ್ಯರ ಸಲಹೆಯ ಮೇರೆಗೆ ನೀವು ಇನ್ಸುಲಿನ್ ಡೋಸ್ ಸಹ ತೆಗೆದುಕೊಳ್ಳಬಹುದು. ಬೇಗನೆ ಆಯಾಸವಾಗುವುದು, ಮೂತ್ರದ ಸಮಸ್ಯೆ, ವಿಪರೀತ ಬಾಯಾರಿಕೆ, ಕೈ ಕಾಲುಗಳಲ್ಲಿ ನೋವು ಮತ್ತು ತಲೆನೋವು ಇವೆಲ್ಲವೂ ಸಕ್ಕರೆ ಕಾಯಿಲೆಯ ಲಕ್ಷಣಗಳು. ಇದಲ್ಲದೆ ಲೈಂಗಿಕ ತೊಂದರೆಯೂ ಉಂಟಾಗಬಹುದು. ಹಸಿವಾಗದೇ ಇರುವುದು, ಹಠಾತ್ ತೂಕ ನಷ್ಟ ಇಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...