alex Certify BIG NEWS: 2023ರಲ್ಲಿ ಈ ದೇಶಕ್ಕೆ ಕಾದಿದೆ ಕೊರೊನಾ ಕಂಟಕ; 10 ಲಕ್ಷ ಜನರ ಸಾವು ನಿಶ್ಚಿತ ಎನ್ನುತ್ತಿದೆ ಹೊಸ ವರದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2023ರಲ್ಲಿ ಈ ದೇಶಕ್ಕೆ ಕಾದಿದೆ ಕೊರೊನಾ ಕಂಟಕ; 10 ಲಕ್ಷ ಜನರ ಸಾವು ನಿಶ್ಚಿತ ಎನ್ನುತ್ತಿದೆ ಹೊಸ ವರದಿ….!

ಜಗತ್ತಿನಾದ್ಯಂತ ಕೊರೊನಾ ಅಬ್ಬರ ತಗ್ಗಿದ್ದರೂ ಚೀನಾ ಮಾತ್ರ ಇನ್ನೂ ಮಾರಕ ವೈರಸ್‌ನಿಂದ ಮುಕ್ತವಾಗಿಲ್ಲ. ಅಮೆರಿಕದ ಸಂಶೋಧನೆಯೊಂದರ ಪ್ರಕಾರ ಚೀನಾದಲ್ಲಿ ಕೋವಿಡ್‌ನಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಲಿವೆ. 2023 ರಲ್ಲಿ ಕೊರೋನಾ ಸಾಂಕ್ರಾಮಿಕದ ವಿನಾಶ ಚೀನಾದಲ್ಲಿ ನಿಶ್ಚಿತವೆಂದು ಹೇಳಲಾಗ್ತಿದೆ.

ಮುಂದಿನ ವರ್ಷ ಏಪ್ರಿಲ್ ವೇಳೆಗೆ ಚೀನಾದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ಏರಲಿವೆ ಎಂದು ಅಂದಾಜಿಸಲಾಗಿದೆ. ಕೊರೊನಾ ವೈರಸ್‌ ಮೂಲಕ ಇಡೀ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಚೀನಾದಲ್ಲಿ 2023ರವೇಳೆಗೆ ಈ ಸೋಂಕಿನಿಂದಲೇ 10 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಾರೆಂದು ಹೇಳಲಾಗ್ತಿದೆ. ಆ ಸಮಯದಲ್ಲಿ ಚೀನಾದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಕರೋನಾ ಸೋಂಕಿಗೆ ಒಳಗಾಗುತ್ತಾರೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾಕ್ಕೆ ಕೊರೊನಾ ಕಂಟಕ ಕಾದಿದೆಯಂತೆ.

ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ & ಇವಾಲ್ಯುಯೇಷನ್ ​​ತನ್ನ ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿದೆ. ಇದರ ಪ್ರಕಾರ ಚೀನಾದಲ್ಲಿ ಝೀರೋ ಕೋವಿಡ್ ನೀತಿಯನ್ನು ಇತ್ತೀಚೆಗೆ ಸಡಿಲಿಸಿದ ಬಳಿಕ ಕರೋನಾ ಪ್ರಕರಣಗಳು ವೇಗವಾಗಿ ಏರುತ್ತಿವೆ. ಸದ್ಯದಲ್ಲೇ ಕ್ರಿಸ್ಮಸ್‌ ಹಾಗೂ ಹೊಸ ವರ್ಷಾಚರಣೆ ಬರ್ತಿರೋದ್ರಿಂದ ಸೋಂಕು ಮತ್ತಷ್ಟು ಹೆಚ್ಚಾಗಬಹುದು. ಅಧ್ಯಯನದ ಪ್ರಕಾರ ಚೀನಾದ 1.4 ಶತಕೋಟಿ ಜನರು ಕೋವಿಡ್‌ಗೆ ತುತ್ತಾಗಲಿದ್ದಾರೆ.

2023ರ ಏಪ್ರಿಲ್ 1ರ ಸುಮಾರಿಗೆ ಸೋಂಕಿತರ ಸಂಖ್ಯೆ ಉತ್ತುಂಗಕ್ಕೇರಲಿದೆ. ಆ ಸಮಯದಲ್ಲಿ ಸಾವಿನ ಸಂಖ್ಯೆ 3,22,000ರಷ್ಟಾಗುತ್ತದೆ. ಕೊರೊನಾ ವಿಷಯದಲ್ಲಿ ಚೀನಾ ನಿರಂತರವಾಗಿ ಜಗತ್ತಿಗೆ ಸುಳ್ಳು ಹೇಳುತ್ತಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು COVID ನಿರ್ಬಂಧಗಳನ್ನು ತೆಗೆದು ಹಾಕಿದಾಗಿನಿಂದ ಯಾವುದೇ ಅಧಿಕೃತ ಕೊರೊನಾ ಸಾವು ವರದಿಯಾಗಿಲ್ಲ. ಚೀನಾದಲ್ಲಿ ಕೊನೆಯ ಅಧಿಕೃತ ಸಾವು ಡಿಸೆಂಬರ್ 3 ರಂದು ದಾಖಲಾಗಿದೆ. ಪ್ರಸ್ತುತ, ಚೀನಾದಲ್ಲಿ ಕರೋನಾದಿಂದ ಅಧಿಕೃತ ಸಾವಿನ ಸಂಖ್ಯೆ 5235 ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...