
ʼಪಠಾಣ್ʼ ಚಿತ್ರದ ವೈರಲ್ ಹಾಡಿನ ವಿಡಿಯೋದಿಂದ ಭಾರಿ ಟ್ರೋಲ್ಗೆ ಒಳಗಾಗಿರುವ ನಟ ಶಾರುಖ್ ಖಾನ್ ಇದೀಗ ಇನ್ನೊಂದು ವಿಷಯದಲ್ಲಿ ವೈರಲ್ ಆಗಿದ್ದಾರೆ.
ಶಾರುಖ್ ಖಾನ್ ಪರ ಬ್ಯಾಟಿಂಗ್ ಬೀಸಿ ಕೆಲವರ ಆಕ್ರೋಶಕ್ಕೆ ಕಾರಣರಾಗಿರುವ ನಟ ಅಮಿತಾಭ್ ಬಚ್ಚನ್ ಅವರ ಕಾಲಿಗೆ ಶಾರುಖ್ ಖಾನ್ ಬಿದ್ದಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾರೆ.
ಚಲನಚಿತ್ರೋತ್ಸವದ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋದಲ್ಲಿ, ಅವರು ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಪಾದಗಳನ್ನು ಸ್ಪರ್ಶಿಸುತ್ತಿರುವುದನ್ನು ನೋಡಬಹುದು, ಇದಕ್ಕೆ ಪ್ರತಿಕ್ರಿಯೆಯಾಗಿ, ಬಿಗ್ ಬಿ ತಕ್ಷಣವೇ ಶಾರುಕ್ ಅವರನ್ನು ಈವೆಂಟ್‌ನಲ್ಲಿ ತಬ್ಬಿಕೊಂಡರು.
“ಹಿರಿಯರ ಮೇಲೆ ಅವರು ಹೊಂದಿರುವ ಪ್ರೀತಿ!” ಎಂಬ ಶೀರ್ಷಿಕೆ ಅಡಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಅಭಿಮಾನಿಗಳ ಪುಟಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗಿದೆ. ಬಿಗ್ ಬಿ ಮತ್ತು ಜಯಾ ಬಚ್ಚನ್ ಅವರ ಪುತ್ರ ಮತ್ತು ನಟ ಅಭಿಷೇಕ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರಾಣಿ ಮುಖರ್ಜಿ ಅವರಂತಹ ಇತರ ಸೆಲೆಬ್ರಿಟಿಗಳು, ಅರಿಜಿತ್ ಸಿಂಗ್ ಮತ್ತು ಶತ್ರುಘ್ನ ಸಿನ್ಹಾ ಕೂಡ ಸೇರಿದ್ದಾರೆ.
ಇದಕ್ಕೆ ಶಾರುಖ್ ಖಾನ್ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದರೆ, ಪಠಾಣ್ ಚಿತ್ರದ ವೈರಲ್ ಹಾಡಿನಿಂದಾಗಿ ಶಾರುಖ್ ಹಾಗೂ ಅಮಿತಾಭ್ ವಿರುದ್ಧ ಜನರು ಕಿಡಿ ಕಾರುತ್ತಿದ್ದಾರೆ.